ಶಿಕಾಗೊದಲ್ಲಿ ಹಿಮ ಮಾರುತ; ಸಾವಿರಕ್ಕೂ ಅಧಿಕ ವಿಮಾನಗಳ ಹಾರಾಟ ರದ್ದು
Update: 2020-01-12 20:25 IST
ಶಿಕಾಗೊ (ಅಮೆರಿಕ), ಜ. 12: ಚಳಿಗಾಲದ ಬಿರುಗಾಳಿಯು ರಭಸದ ಗಾಳಿ ಮತ್ತು ಮಳೆಯೊಂದಿಗೆ ಶಿಕಾಗೊಗೆ ಅಪ್ಪಳಿಸಿದ್ದು, ಶನಿವಾರ 1,000ಕ್ಕೂ ಅಧಿಕ ವಿಮಾನಗಳ ಹಾರಾಟವನ್ನು ರದ್ದುಪಡಿಲಾಗಿದೆ.
ಶನಿವಾರ ಬೆಳಗ್ಗೆ, ಶಿಕಾಗೊ ನಗರದ ಒ’ಹೇರ್ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವು 950ಕ್ಕೂ ಅಧಿಕ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿತು. ಅದೇ ವೇಳೆ, ಮಿಡ್‌ವೇ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವು ಸುಮಾರು 50 ವಿಮಾನಗಳ ಹಾರಾಟವನ್ನು ರದ್ದುಗೊಳಿಸಿತು ಎಂದು ಕ್ಸಿನುವಾ ಸುದ್ದಿಸಂಸ್ಥೆ ವರದಿ ಮಾಡಿದೆ.ಶಈಗ ಉಚ್ಚಾಟಿಸಲಾಗುತ್ತಿರುವ
ಶಿಕಾಗೊ ಪ್ರದೇಶ ಮತ್ತು ಉತ್ತರ ಇಲಿನಾಯಿಸ್ ರಾಜ್ಯಗಳಲ್ಲಿ ಶುಕ್ರವಾರ ರಾತ್ರಿಯಿಂದ ಆರಂಭವಾದ ಶೀತಲ ಮಳೆಯು ಶನಿವಾರ ಬೆಳಗ್ಗಿನವರೆಗೂ ಮುಂದುವರಿಯಿತು.
ಈ ನಡುವೆ, ಲೂಸಿಯಾನ ರಾಜ್ಯದಲ್ಲಿ ಪ್ರಬಲ ಬಿರುಗಾಳಿಗೆ ಸಿಲುಕಿದ ವದ್ಧ ದಂಪತಿಯೊಂದರ ಮನೆ ನಾಶವಾಗಿದೆ ಹಾಗೂ ದಂಪತಿ ಸಾವಿಗೀಡಾಗಿದ್ದಾರೆ.