×
Ad

ಕರಾವಳಿಯ ದಲಿತರು ಲಿಂಗಾಯಿತರೇ: ಜಯನ್ ಮಲ್ಪೆಪ್ರಶ್ನೆ

Update: 2020-01-12 20:43 IST

ಉಡುಪಿ, ಜ.12: ಜಿಲ್ಲೆಯ ಕರಾವಳಿ ಭಾಗದ ದಲಿತರ ಮೂಲತಃ ಲಿಂಗಾಯಿತ ಧರ್ಮಕ್ಕೆ ಸೇರಿದವರೇ ಎಂಬ ಜಿಜ್ಞಾಸೆ ಕಾಡುತ್ತಿದೆ. ಈ ಬಗ್ಗೆ ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ದಲಿತ ಚಿಂತಕ ಜಯನ್ ಮಲ್ಪೆ ಅಭಿಪ್ರಾಯ ಪಟ್ಟಿದ್ದಾರೆ.

ಕೆಮ್ಮಣ್ಣು ಪಡುಕುದ್ರುವಿನಲ್ಲಿ ಅಂಬೇಡ್ಕರ್ ಯುವಸೇನೆಯ ಶಾಖೆಯನ್ನು ರಚಿಸುವ ಕುರಿತು ರವಿವಾರ ನಡೆದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಅವರು ಮಾತ ನಾಡುತಿದ್ದರು.

ಉದ್ಯೋಗ ಅರಸಿ ವಲಸೆ ಬಂದ ಲಿಂಗಾಯಿತರ ಒಂದು ತಂಡ ಇಲ್ಲಿನ ಮೀನು ತಿನ್ನುವ ಆಸೆಗಾಗಿ ತಮ್ಮ ಜನಿವಾರದಲ್ಲಿರುವ ಲಿಂಗವನ್ನು ದೇವಸ್ಥಾನ ಒಂದರ ಕೆರೆಗೆ ಎಸೆದಿರುವುದರಿಂದಲೇ ಕುಂದಾಪುರದ ಕೊಟೇಶ್ವರದ ಕೋಟಿ ಲಿಂಗ ದೇವಸ್ಥಾನ ಪ್ರಸಿದ್ಧಿಯಾಗಿದೆ. ಇದೇ ತಂಡ ಮೂರು ವಿಂಗಡಣೆಯಾಗಿ ಉಪ್ಪಾರ, ಕೂಸಾಲ, ಮುಂಡಾಲರು ಎಂದು ಕರೆಯಲ್ಪಟ್ಟರು ಮತ್ತು ಆಗಿನ ಮಣಿಪಾಲದ ಟಿಎಪೈ ಇವರನ್ನು ಪರಿಶಿಷ್ಟ ಜನಾಂಗದ ಪಟ್ಟಿಗೆ ಸೇರಿಸಿದರು ಎಂಬ ವಾದವಿದೆ. ಹಾಗಾಗಿ ಈ ಬಗ್ಗೆ ಅಧ್ಯಯನ ನಡೆಯಬೇಕಾಗಿದೆ ಎಂದು ಅವರು ತಿಳಿಸಿದರು.

ಮುಖ್ಯ ಅಥಿತಿಯಾಗಿ ಇಂಜಿನಿಯರ್ ರಮೇಶ್ ಪಾಲ್ ಮಾತನಾಡಿ, ಅಂಬೇಡ್ಕರ್ ಯುವಸೇನೆ ಕೇವಲ ಒನ್ನೊಂದು ಸಂಘಟನೆಯಲ್ಲ. ದಲಿತ ಸಮುದಾಯವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಸಬಲೀಕರಣ ಮಾಡುವ ಉದ್ಧೇಶದಿಂದ ಹುಟ್ಟುಕೊಂಡಿದೆ. ಮುಂದಿನ ಅಂಬೇಡ್ಕರ್ ಜಯಂತಿಗೆ ದಲಿತರಿಗೆ ಆರೋಗ್ಯ ಕಾರ್ಡ್ ಮತ್ತು ಬ್ಲಡ್ ಬ್ಯಾಂಕ್ ಉಚಿತವಾಗಿ ನೀಡುವುದಲ್ಲದೆ, ದಲಿತರ ನಿರುದ್ಯೋಗ ಸಮಸ್ಯೆ ಪರಿಹರಿಸುವಲ್ಲಿ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದರು.

ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ವಹಿಸಿದ್ಧರು. ಹಿರಿಯ ದಲಿತ ಮುಖಂಡ ಸುಂದರ್ ಕಪ್ಪೆಟ್ಟು, ಅಂಬೇಡ್ಕರ್ ಯುವಸೇನೆಯ ಮುಖಂಡರಾದ ಗುಣವಂತ ತೊಟ್ಟಂ, ಸಂತೋಷ್ ಕಪ್ಪೆಟ್ಟು, ಅಚ್ಚುತ್ತ ಗುರಿಕಾರ, ಸುರೇಂದ್ರ, ರಷಿ, ಪ್ರಜ್ವಲ್, ಅಶೋಕ, ಶಿವಾನಂದ, ಅನೀಶ್, ನಿಕೀಲ್ ಕುಮಾರ್, ಉದಯ, ಸುಧಾಕರ್, ಶ್ರೀಕಾಂತ್, ಜರ್ನಾದನ್ ಮೊದಲಾದವರು ಉಪಸ್ಥಿತರಿದ್ದರು. ಹರಿದಯ ಸ್ವಾಗತಿಸಿ, ಅವಿನಾಶ್ ಮಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News