ಕಾಪು : ಆರ್.ಕೆ. ಪಾರ್ಟಿ ಹಾಲ್, ಗೆಸ್ಟ್ ಹೌಸ್ ಉದ್ಘಾಟನೆ

Update: 2020-01-12 15:55 GMT

ಕಾಪು : ಕಾಪು ಮಜೂರಿನ ಮಲ್ಲಾರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಆರ್.ಕೆ. ಗೆಸ್ಟ್ ಗೌಸ್ ಮತ್ತು ಪಾರ್ಟಿ ಹಾಲ್ ರವಿವಾರ ಲೋಕಾರ್ಪಣೆಗೊಂಡಿತು. 

ಕಟ್ಟಡವನ್ನು ಉದ್ಘಾಟಿಸಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಜಿಲ್ಲೆಯ ಕಾಪು ತಾಲ್ಲೂಕಿನಲ್ಲಿ ಪ್ರವಾಸೋಧ್ಯಮಕ್ಕೆ ವಿಪುಲ ಅವಕಾಶಗಳಿವೆ. ಪ್ರವಾಸಿಗರನ್ನು ಸೆಳೆಯಲು ಇಂತಹ ಗೆಸ್ಟ್ ಹೌಸ್‍ಗಳ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಪ್ರವಾಸಿಗರ ಅನುಕೂಲಕ್ಕೆ ಬೇಕಾದ ವ್ಯವಸ್ಥೆಯಲ್ಲಿ ಕಲ್ಪಿಸಿಕೊಡಬೇಕಾಗಿದೆ ಎಂದು ಶುಭಹಾರೈಸಿದರು.

ಪರ್ಕಳ ಬಳಕೆದಾರರ ಅಜೀವ್ ಗೌರವಾಧ್ಯಕ್ಷ ಹಾಜಿ ಕೆ. ಅಬೂಬಕ್ಕರ್ ಪರ್ಕಳ ಮಾತನಾಡಿ, ಕೇವಲ ವ್ಯಾಪಾರ ಮನೋಭಾವ ದಿಂದ ಮಾಡಿದರೂ ಸಾಮಾನ್ಯ ಬಡ ಜನರ ಸಮಸ್ಯೆಗೂ ಸ್ಪಂದಿಸಬೇಕು. ಇಂತಹ ಉತ್ತಮ ಸೌಕರ್ಯಗಳನ್ನು ಕಲ್ಪಿಸಿಕೊಡುವ ಮೂಲಕ ಕಾಪುವಿನ ಮಾತ್ರವಲ್ಲದೆ ಪ್ರವಾಸಿಗರಿಗೆ ಉತ್ತಮ ವ್ಯವಸ್ಥೆ ನೀಡುವಂತಾಗಿದೆ ಎಂದು ಹೇಳಿದರು.

ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್ ಶುಭಹಾರೈಸಿದರು. ಮಜೂರು-ಮಲ್ಲಾರು ಜುಮ್ಮಾ ಮಸೀದಿ ಖತೀಬ್ ಅಬ್ದುಲ್ ರಶೀದ್ ಸಖಾಫಿ ಅಲ್ ಖಾಮಿಲ್ ದುವಾ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಬೆಳಪು ಗ್ರಾಮ ಪಂ. ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ವಹಿಸಲಿದ್ದಾರೆ.

ವಕ್ಫ್ ಬೋರ್ಡು ಜಿಲ್ಲಾ ವೈಸ್‍ಚಯರ್‍ಮೆನ್ ಗುಲಾಂ ಮುಹಮ್ಮದ್ ಹೆಜಮಾಡಿ, ಅನಿವಾಸಿ ಉದ್ಯಮಿ ರಜಬ್ ಬ್ಯಾರಿ ಪರ್ಕಳ, ತಾಲ್ಲೂಕು ಪಂಚಾಯಿತಿ ಸದಸ್ಯ ಮೈಕಲ್ ರಮೇಶ್ ಡಿಸೋಜ, ಶಿರ್ವ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ದಯಾನಂದ ಶೆಟ್ಟಿ ದೆಂದೂರ್‍ಕೆಟ್ಟೆ, ಜನಸೇವಾ ಜನಸಂಪರ್ಕ ವೇದಕೆ ಅಧ್ಯಕ್ಷ ದಿವಾಕರ ಬಿ. ಶೆಟ್ಟಿ, ಸುನಿಲ್ ಕ್ಯಾಬ್ರೆಲ್, ಡಾ. ಅಬ್ದುಲ್ ರಝಾಕ್ ಯು.ಕೆ. ಕಾಪು, ಕೆಪಿಸಿಸಿ ಅಲ್ಪಸಂಖ್ಯಾತ ಕಾರ್ಯದರ್ಶಿ ಮುಹಮ್ಮದ್ ಫಾರೂಕ್ ಚಂದ್ರನಗರ, ಕಾಪು ಪುರಸಭಾ ಸದಸ್ಯೆ ಮಾಲಿನಿ ಮಾಲಕರಾದ ಅಬ್ದುಲ್ ಖಾದಿರ್ ಹಾಗೂ ಮುಹಮ್ಮದ್ ಮೀರಾನ್ ಉಪಸ್ಥಿತರಿದ್ದರು.

ಸಮಾಜ ಸೇವಕ ಮುಹಮ್ಮದ್ ಫಾರೂಕ್ ಚಂದ್ರನಗರ ಸ್ವಾಗತಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ನಿರ್ಮಲ್ ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಸಮಾಜ ಸೇವಾ ವೇದಿಕೆ ಸಂಚಾಲಕ ದಿವಾಕರ ಡಿ. ಶೆಟ್ಟಿ ವಂದಿಸಿದರು. 

ಹೋಂ ಸ್ಟೇ, ಬರ್ತ್‍ಡೇ ಪಾರ್ಟಿ, ಮದುವೆ ಹಾಗೂ ಮೆಹಂದಿ ಕಾರ್ಯಕ್ರಮಗಳು ಅಲ್ಲದೆ ಸಭೆ ಸಮಾರಂಭಗಳಿಗೆ ಉತ್ತಮ ಸೌಕರ್ಯಗಳುಲ್ಲ ಸಭಾಂಗಣಗಳನ್ನು ನಿರ್ಮಿಸಲಾಗಿದೆ. ಲಿವಿಂಗ್ ಹಾಲ್, ಡೈನಿಂಗ್, ಕಿಚನ್, ಐದು ಬೆಡ್‍ರೂಂ ಆರ್.ಕೆ. ಗೆಸ್ಟ್ ಹೌಸ್‍ನಲ್ಲಿ ಇದೆ. ಪಾರ್ಟಿ ಹಾಲ್‍ನಲ್ಲಿ 5000 ಚದರ ಅಡಿಯ ಹೊರಾಂಗಣ. ಸ್ಟೋರ್ ರೂಂ, ಕಿಚನ್, ಕ್ಯಾಟರಿಂಗ್ ವ್ಯವಸ್ಥೆ ಹಾಗೂ ಇವೆಂಟ್ ಮ್ಯಾನೇಜ್‍ಮೆಂಟ್‍ಗಳು ಇರುತ್ತದೆ ಎಂದು ಪ್ರಕಟನೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News