ಪೌರತ್ವ ಕಾಯ್ದೆಯ ಬಗ್ಗೆ ಪ್ರಧಾನಿಯ ಹೇಳಿಕೆ: ಅಂತರ ಕಾಯ್ದುಕೊಂಡ ರಾಮಕೃಷ್ಣ ಮಿಷನ್

Update: 2020-01-12 16:42 GMT

ಕೋಲ್ಕತಾ, ಜ.12: ಪೌರತ್ವ ಕಾಯ್ದೆಯ ಬಗ್ಗೆ ರವಿವಾರ ಕೋಲ್ಕತಾದ ರಾಮಕೃಷ್ಣ ಮಠದಲ್ಲಿ ಪ್ರಧಾನಿ ಮೋದಿಯವರ ವ್ಯಾಖ್ಯಾನಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ರಾಮಕೃಷ್ಣ ಮಿಷನ್ ಸ್ಪಷ್ಟಪಡಿಸಿದೆ.

ರಾಮಕೃಷ್ಣ ಮಿಷನ್ ರಾಜಕೀಯೇತರ ಸಂಸ್ಥೆಯಾಗಿದ್ದು ಇದು ಎಲ್ಲರನ್ನೂ ಒಳಗೊಂಡಿರುವ ಸಂಸ್ಥೆ. ಇಲ್ಲಿ ಹಿಂದು, ಇಸ್ಲಾಮ್, ಕ್ರಿಶ್ಚಿಯನ್ ಸಮುದಾಯದ ಸನ್ಯಾಸಿಗಳಿದ್ದಾರೆ. ಒಂದೇ ತಾಯಿಯ ಮಕ್ಕಳಂತೆ ಇಲ್ಲಿದ್ದೇವೆ. ಮನೆಯಿಂದ ಹೊರಟ ಬಳಿಕ ಚಿರಂತನ ಕರೆಗೆ ಉತ್ತರಿಸಲು ನಾವಿಲ್ಲಿ ಬಂದಿದ್ದೇವೆ. ಕ್ಷಣಿಕ ಕರೆಗೆ ಉತ್ತರಿಸಲು ಅಲ್ಲ ಎಂದು ರಾಮಕೃಷ್ಣ ಮಿಷನ್‌ನ ಪ್ರಧಾನ ಕಾರ್ಯದರ್ಶಿ ಸುವಿರಾನಂದ ಪ್ರತಿಕ್ರಿಯಿಸಿದ್ದಾರೆ.

ನರೇಂದ್ರ ಮೋದಿ ದೇಶದ ನಾಯಕ. ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದ ನಾಯಕಿ ಎಂದಷ್ಟೇ ನಾವು ಭಾವಿಸುತ್ತೇವೆ ಎಂದವರು ಹೇಳಿದ್ದಾರೆ. ರಾಮಕೃಷ್ಣ ಮಿಷನ್‌ನಲ್ಲಿ ಮಧ್ಯಾಹ್ನ ನಡೆದಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಪೌರತ್ವ ಕಾಯ್ದೆ ಪೌರತ್ವವನ್ನು ಕಸಿಯುವುದಿಲ್ಲ, ಪೌರತ್ವ ನೀಡುತ್ತದೆ. ಸ್ವಾತಂತ್ರ್ಯ ದೊರೆತ ಬಳಿಕ ಪಾಕಿಸ್ತಾನದಲ್ಲಿ ಕಿರುಕುಳಕ್ಕೆ ಒಳಗಾಗುವ ಅಲ್ಪಸಂಖ್ಯಾತರಿಗೆ ಭಾರತ ಪೌರತ್ವ ನೀಡಬೇಕೆಂಬುದು ಮಹಾತ್ಮಾ ಗಾಂಧೀಜಿ ಹಾಗೂ ಇತರ ಮಹಾನ್ ನಾಯಕರ ಅಭಿಮತವಾಗಿತ್ತು ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News