ಕಂದಹಾರ್‌ನಲ್ಲಿ ದಾಳಿ: ಇಬ್ಬರು ಅಮೆರಿಕ ಸೈನಿಕರ ಸಾವು

Update: 2020-01-12 18:13 GMT

ಕಂದಹಾರ್ (ಅಫ್ಘಾನಿಸ್ತಾನ), ಜ. 12: ದಕ್ಷಿಣ ಅಫ್ಘಾನಿಸ್ತಾನದ ಕಂದಹಾರ್‌ನಲ್ಲಿ ಶನಿವಾರ ಅಮೆರಿಕದ ಸೇನಾ ವಾಹನವೊಂದನ್ನು ಗುರಿಯಾಗಿಸಿ ನಡೆದ ಬಾಂಬ್ ಸ್ಫೋಟದಲ್ಲಿ ಇಬ್ಬರು ಅಮೆರಿಕ ಸೈನಿಕರು ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ.

‘‘ಅಮೆರಿಕ ರಕ್ಷಣಾ ಇಲಾಖೆಯ ನೀತಿಯ ಪ್ರಕಾರ, ಮೃತರ ಕುಟುಂಬ ಸದಸ್ಯರಿಗೆ ಮಾಹಿತಿ ತಲುಪಿದ 24 ಗಂಟೆಗಳವರೆಗೆ ಮೃತ ಸೈನಿಕರ ಹೆಸರನ್ನು ಬಹಿರಂಗಪಡಿಸಲಾಗುವುದಿಲ್ಲ’’ ಎಂದು ನ್ಯಾಟೊ ಹೇಳಿಕೆಯೊಂದರಲ್ಲಿ ತಿಳಿಸಿದೆ.

ದಾಳಿಯ ಹೊಣೆಯನ್ನು ತಾಲಿಬಾನ್ ವಹಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News