×
Ad

ಎಸ್‌ಐಓ ಉಡುಪಿ ಜಿಲ್ಲಾಧ್ಯಕ್ಷರಾಗಿ ನಾಸೀರ್ ಹೂಡೆ

Update: 2020-01-13 19:31 IST

ಉಡುಪಿ, ಜ.13: ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಉಡುಪಿ ಜಿಲ್ಲೆಯ ನೂತನ ಜಿಲ್ಲಾಧ್ಯಕ್ಷರಾಗಿ ನಾಸೀರ್ ಹೂಡೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಹೂಡೆ ಸಾಲಿಹಾತ್ ಶಾಲೆಯಲ್ಲಿ ನಡೆದ ಎರಡು ದಿನಗಳ ವಲಯ ಸದಸ್ಯರ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು. ಜಿಲ್ಲಾ ಕಾರ್ಯದರ್ಶಿಯಾಗಿ ಶಾರೂಕ್ ತೀರ್ಥಹಳ್ಳಿ ಪುನರ್ ಆಯ್ಕೆಯಾದರು.

ಉಡುಪಿ ಸ್ಥಾನಿಯ ಶಾಖೆಯ ಅಧ್ಯಕ್ಷರಾಗಿ ಫಾಝಿಲ್, ಮಲ್ಪೆ ಸ್ಥಾನಿಯ ಅಧ್ಯಕ್ಷರಾಗಿ ಫೈಸಲ್ ಅಹ್ಮದ್, ಹೂಡೆ ಸ್ಥಾನಿಯ ಅಧ್ಯಕ್ಷರಾಗಿ ಅಫ್ವಾನ್ ಅರವರನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News