×
Ad

ಹಮೀದ್ ಪಕ್ಕಲಡ್ಕರಿಗೆ ನಿರತ ಸಾಹಿತ್ಯ ಪ್ರಶಸ್ತಿ

Update: 2020-01-13 19:53 IST

ಮಂಗಳೂರು, ಜ.13: ನಿರತ ಸಾಹಿತ್ಯ ಸಂಪದ ಕಡೆಗೋಳಿ ತುಂಬೆ ಇದರ 23ನೇ ಹುಟ್ಟು ಹಬ್ಬದ ಪ್ರಯುಕ್ತ ನಡೆದ ರಾಜ್ಯಮಟ್ಟದ ‘ನಿರತ ಸಾಹಿತ್ಯ ಪ್ರಶಸ್ತಿ 2020’ಕ್ಕೆ ಅಬ್ದುಲ್ ಹಮೀದ್ ಪಕ್ಕಲಡ್ಕ ಆಯ್ಕೆಯಾಗಿದ್ದಾರೆ.

ಹಮೀದ್ ಅವರ ‘ಒಂಟಿ ತೆಪ್ಪ’ ಕಥಾಸಂಕಲನಕ್ಕೆ ಪ್ರಶಸ್ತಿಯು ಲಭಿಸಿದೆ. 75 ವರ್ಷ ಪ್ರಾಯದ ಹಮೀದ್ 5 ಕಥಾ ಸಂಕಲನಗಳನ್ನು ರಚಿಸಿದ್ದಾರೆ. ಈಗಾಗಲೆ ಹಮೀದ್ ಅವರಿಗೆ ಲಂಕೇಶ್ ಪ್ರಶಸ್ತಿ, ಮುಸ್ಲಿಂ ಸಾಹಿತ್ಯ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ಕಾವ್ಯ ಕೇದಗೆ ಪ್ರಶಸ್ತಿ, ಬಾಂಧವ್ಯ ಕಥಾ ಪುರಸ್ಕಾರ ಹಾಗೂ ಬ್ಯಾರಿ ಸಾಹಿತ್ಯ ಪುರಸ್ಕಾರ ಲಭಿಸಿದೆ.

ಅರಣ್ಯ ಇಲಾಖಾ ನಿವೃತ್ತ ಅಧೀಕ್ಷರಾಗಿರುವ ಹಮೀದ್‌ಗೆ ಜ.19ರಂದು ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ‘ನಿರತದ ವಾರ್ಷಿಕ ಹುಟ್ಟುಹಬ್ಬದ ದಿನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

....

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News