ಮೊಗವೀರ ಪಟ್ಣದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ
ಮಂಗಳೂರು, ಜ.13: ಪ್ರವಾಸಿಗರು, ಮೀನುಗಾರರು, ಊರಿನವರಿಗೆ ಅನುಕೂಲವಾಗುವಂತೆ ಉಳ್ಳಾಲದ ಅಬ್ಬಕ್ಕ ವೃತ್ತದಿಂದ ಮೊಗವೀರ ಪಟ್ನ ಮೂಲಕ ಕೋಟೆಪುರದವರೆಗೆ ಸುಸಜ್ಜಿತ ರಾಜಮಾರ್ಗ ನಿರ್ಮಿಸಲಾಗುವುದು ಎಂದು ಶಾಸಕ ಯುಟಿ ಖಾದರ್ ಹೇಳಿದರು.
ಉಳ್ಳಾಲದ ಅಬ್ಬಕ್ಕ ವೃತ್ತದಿಂದ ಮೊಗವೀರ ಪಟ್ನ ಮೂಲಕ ಕೋಟೆಪುರದವರೆಗೆ ಲೋಕೋಪಯೋಗಿ ಇಲಾಖೆಯಿಂದ ನಡೆಯಲಿರುವ ರಸ್ತೆಯ ಮರುಡಾಮಾರು ಕಾಮಗಾರಿಗೆ ಮೊಗವೀರ ಪಟ್ನದಲ್ಲಿ ಶಂಕುಸ್ಥಾಪನೆಗೈದು ಅವರು ಮಾತನಾಡಿದರು.
ರಸ್ತೆಗೆ ಅತ್ಯಂತ ಸುಂದರವಾಗಿ ನಿರ್ಮಿಸುವ ನಿಟ್ಟಿನಲ್ಲಿ ಸಂಪೂರ್ಣ ಕಾಂಕ್ರೀಟ್, ಅಗತ್ಯ ಇರುವಲ್ಲಿ ಫುಟ್‌ಪಾತ್, ಚರಂಡಿ ನಿರ್ಮಿಸುವ ನಿಟ್ಟಿನಲ್ಲಿ 5 ಕೋ.ರೂ. ಅನುದಾನಕ್ಕಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ನೀಲಿನಕ್ಷೆ ಸಿದ್ಧಪಡಿಸಲಾಗಿದೆ. ಅನುದಾನ ಬರುವವರೆಗೆ ಗುಂಡಿರಹಿತ ರಸ್ತೆಯ ನ್ನಾಗಿಸಲು ಮೊದಲ ಹಂತದಲ್ಲಿ 70 ಲಕ್ಷ ರೂ.ವೆಚ್ಚದಲ್ಲಿ ಮರು ಡಾಮಾರು ಕಾಮಗಾರಿ ನಡೆಸಲಾಗುತ್ತಿದೆ ಎಂದರು.
ಶ್ರೀವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದ ಮಧ್ಯಸ್ಥ ಗಂಗಾಧರ ಸುವರ್ಣ, ಮೊಗವೀರ ಮುಖಂಡರಾದ ಸದಾನಂದ ಬಂಗೇರ, ದಾಮೋದರ್, ಉಳ್ಳಾಲ ನಗರಸಭೆಯ ಮಾಜಿ ಅಧ್ಯಕ್ಷ ಹುಸೈನ್ ಕುಂಞಿಮೋನು, ಸದಸ್ಯರಾದ ಅಯೂಬ್ ಮಂಚಿಲ, ಬಾಝಿಲ್ ಡಿಸೋಜ, ಮುಹಮ್ಮದ್ ಮುಕಚ್ಚೇರಿ, ಯು.ಎ.ಇಸ್ಮಾಯಿಲ್, ಮಾಜಿ ಸದಸ್ಯ ಮುಸ್ತಫಾ ಅಬ್ದುಲ್ಲಾ, ಪ್ರಮುಖರಾದ ಯು.ಕೆ.ಅಹ್ಮದ್ ಬಾವ ಕೊಟ್ಟಾರ, ಸೋಲಾರ್ ಹನೀಫ್, ಈಶ್ವರ್ ಉಳ್ಳಾಲ್, ದೇವಕಿ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.