×
Ad

ಮಾನವೀಯತೆ ಮೆರೆದ ಚಾಲಕ, ನಿರ್ವಾಹಕರಿಗೆ ಬಸ್ಸಿನಲ್ಲೇ ಗೌರವ

Update: 2020-01-13 20:47 IST

ಉಡುಪಿ, ಜ.13: ಬಸ್ಸಿನಲ್ಲಿ ವಿಷ ಸೇವಿಸಿದ ತಮಿಳುನಾಡು ಮೂಲದ ಮಗು ಸೇರಿದಂತೆ ಮೂವರನ್ನು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದ ಬಸ್ ಚಾಲಕ ಮತ್ತು ನಿರ್ವಾಹಕರನ್ನು ಉಡುಪಿ ಬೀಯಿಂಗ್ ಸೋಶಿಯಲ್ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ತಿಯಿಂದ ರವಿವಾರ ಗೌರವಿಸಲಾಯಿತು.

ಉಡುಪಿ ಸರ್ವಿಸ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ಎಕೆಎಂಎಸ್ ಬಸ್ಸಿನಲ್ಲಿ ಸಾರ್ವಜನಿಕರ ಪ್ರಶಂಸೆಗೆ ಕಾರಣರಾದ ಅದರ ಚಾಲಕ ಇಕ್ಬಾಲ್ ಹಾಗೂ ನಿರ್ವಾಹಕ ಸತೀಶ್ ಅವರನ್ನು ಪ್ರಯಾಣಿಕರ ಸಮ್ಮುಖದಲ್ಲೇ ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಗುರುತಿಸಲಾಯಿತು.

ಈ ಸಂದರ್ಭದಲ್ಲಿ ಬಿಯಿಂಗ್ ಸೋಶಿಯಲ್‌ನ ಅವಿನಾಶ್ ಕಾಮತ್, ಪ್ರಮೋದ್ ಶೆಟ್ಟಿ, ಪ್ರತಿಷ್ಠಾನದ ರವಿರಾಜ್ ಎಚ್.ಪಿ., ರಾಜೇಶ್ ಭಟ್, ನಿತೀನ್ ನಾಯಕ್, ಪದ್ಮಾಸಿನಿ, ಆಶ್ಲೇಷ್ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News