'ತೆಂಗಿನ ಮರದ ಸ್ನೇಹಿತರು' ತರಬೇತಿ ಕಾರ್ಯಕ್ರಮ
Update: 2020-01-13 20:59 IST
ಉಡುಪಿ, ಜ.13: ‘ತೆಂಗಿನ ಮರದ ಸ್ನೇಹಿತರು’ ತರಬೇತಿ ಕಾರ್ಯಕ್ರಮ ವನ್ನು ಜ.20ರಿಂದ ಫೆ.13ರವರೆಗೆ 25 ದಿನಗಳ ಕಾಲ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸುವ ತರಬೇತುದಾರರಿಗೆ ತೆಂಗಿನ ಮರ ಹತ್ತುವ ಸಾಧನವನ್ನು ಬಳಸಿ ಮರ ಹತ್ತುವ ತರಬೇತಿಯನ್ನು ನೀಡಲಾಗುವುದು ಹಾಗೂ ತೆಂಗಿನ ಬೆಳೆಯಲ್ಲಿ ಸಮಗ್ರ ಬೆಳೆ, ಪೋಷಕಾಂಶ, ಕೀಟ ಮತ್ತು ರೋಗಗಳ ನಿರ್ವಹಣೆ ಕುರಿತು ಮಾಹಿತಿ ನೀಡಲಾಗುವುದು.
45 ವರ್ಷದೊಳಗಿನ 20 ಗ್ರಾಮೀಣ ಯುವಕ ಮತ್ತು ಯುವತಿಯರಿಗೆ ತರಬೇತಿಯಲ್ಲಿ ಭಾಗವಹಿಸಲು ಅವಕಾಶವಿದ್ದು, ಮೊದಲು ನೋಂದಣಿ ಮಾಡಿದವರಿಗೆ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ದೂರವಾಣಿ ಸಂಖ್ಯೆ: 0820-2563923 ಅಥವಾ ಮೊಬೈಲ್ ಸಂಖ್ಯೆ: 9480458083 ಸಂಪರ್ಕಿಸುವಂತೆ ಕೃಷಿ ವಿಜ್ಞಾನ ಕೇಂದ್ರದ ಪ್ರಕಟಣೆ ತಿಳಿಸಿದೆ.