×
Ad

ಹಿರಿಯಡ್ಕ: ರಾಷ್ಟ್ರೀಯ ಯುವ ದಿನಾಚರಣೆ

Update: 2020-01-13 21:00 IST

ಉಡುಪಿ, ಜ.13: ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಘಟಕಗಳು, ಯುವ ರೆಡ್‌ಕ್ರಾಸ್ ಘಟಕ, ರೋವರ್ಸ್‌-ರೇಂಜರ್ಸ್‌ ಘಟಕಗಳು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಇವುಗಳ ಸಹಯೋಗದಲ್ಲಿ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ 158ನೇ ಜನ್ಮ ದಿನದ ಪ್ರಯುಕ್ತ ಯುವ ಸಪ್ತಾಹ-ಯುವ ಸಬಲೀಕರಣ ಕಾರ್ಯಕ್ರಮ ರವಿವಾರ ನಡೆಯಿತು.

ಮಣಿಪಾಲ ಇನ್‌ಸ್ಟಿಟ್ಯೂಟ್ ಆಪ್ ಮ್ಯಾನೇಜ್‌ಮೆಂಟ್‌ನ ಪ್ರಾಧ್ಯಾಪಕ ಪ್ರೊ. ನಂದನ ಪ್ರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಸ್ವಾಮಿ ವಿವೇಕಾನಂದರ ಚಿಂತನೆ: ವಿಮರ್ಶಾತ್ಮಕ ದೃಷ್ಟಿಕೋನ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ರಾಷ್ಟ್ರ-ಸಮಾಜ, ಧರ್ಮ-ಅಧ್ಯಾತ್ಮ, ವ್ಯಕ್ತಿ-ಭಗವತ್ ತತ್ತ್ವ ಎಂಬ ಆರು ಆಯಾಮಗಳಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಯನ್ನು ವಿವರಿಸುತ್ತಾ, ವಿವೇಕಾನಂದರದು ಮತಗಳನ್ನು ಮೀರಿದ ಸಮಾಜಮುಖಿ ಅಧ್ಯಾತ್ಮ ಎಂದರು. ವಿವೇಕಾನಂದರ ವ್ಯಕ್ತಿಪೂಜೆ ಸಲ್ಲ. ಅವರ ತತ್ತ್ವಗಳ ನಿಜವಾದ ಅನುಷ್ಠಾನ ಸಮಾಜದಲ್ಲಿ ಆಗಬೇಕು. ಈ ಮೂಲಕ ನಾವು ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸಬೇಕು ಎಂದು ತಿಳಿಸಿದರು.

ಪ್ರಾಂಶುಪಾಲೆ ಡಾ.ನಿಕೇತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸುಜಯಾ ಕೆ. ಎಸ್., ಐಕ್ಯೂಎಸಿ ಸಂಚಾಲಕಿ ಸುಮನಾ ಬಿ., ಎನ್ನೆಸ್ಸೆಸ್ ಯೋಜನಾಧಿಕಾರಿ ಸುಬಾಷ್ ಎಚ್.ಕೆ., ರೇಂಜ್ಸ್ ಲೀಡರ್ ಸವಿತಾ ಉಪಸ್ಥಿತರಿದ್ದರು.

ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರವೀಣ ಶೆಟ್ಟಿ ಸ್ವಾಗತಿಸಿದರು. ರೋವರ್ ಸ್ಕೌಟ್ ಲೀಡರ್ ಅನಿಲ್‌ಕುಮಾರ್ ಕೆ.ಎಸ್. ಕಾರ್ಯಕ್ರಮ ನಿರೂಪಿಸಿ ಯುವ ರೆಡ್‌ಕ್ರಾಸ್ ಕಾರ್ಯಕ್ರಮಾಧಿಕಾರಿ ಡಾ.ರಾಘವೇಂದ್ರ ಪಿ.ಕೆ. ವಂದಿಸಿದರು.

ಎನ್ನೆಸ್ಸೆಸ್ ಯೋಜನಾಧಿಕಾರಿ ಪ್ರವೀಣ ಶೆಟ್ಟಿ ಸ್ವಾಗತಿಸಿದರು. ರೋವರ್ ಸ್ಕೌಟ್ ಲೀಡರ್ ಅನಿಲ್‌ಕುಮಾರ್ ಕೆ.ಎಸ್. ಕಾರ್ಯಕ್ರಮ ನಿರೂಪಿಸಿ ಯುವ ರೆಡ್‌ಕ್ರಾಸ್ ಕಾರ್ಯಕ್ರಮಾಧಿಕಾರಿ ಡಾ.ರಾಘವೇಂದ್ರ ಪಿ.ಕೆ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News