ಇರಾನ್‌ನಿಂದ ದಾಳಿ ಬಗ್ಗೆ ಟ್ರಂಪ್ ಹೇಳಿಕೆ: ನಿರ್ದಿಷ್ಟ ಬೇಹುಗಾರಿಕೆ ಪುರಾವೆಯಿಲ್ಲ

Update: 2020-01-13 15:37 GMT

ವಾಶಿಂಗ್ಟನ್, ಜ. 13: ಅಮೆರಿಕದ ನಾಲ್ಕು ರಾಯಭಾರ ಕಚೇರಿಗಳ ಮೇಲೆ ದಾಳಿ ನಡೆಸಲು ಇರಾನ್ ಯೋಜನೆ ರೂಪಿಸುತ್ತಿತ್ತು ಎನ್ನುವುದಕ್ಕೆ ಬೇಹುಗಾರಿಕೆ ಅಧಿಕಾರಿಗಳಿಂದ ಬಂದ ನಿರ್ದಿಷ್ಟ ಪುರಾವೆಯನ್ನು ನಾನು ನೋಡಿಲ್ಲ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ರವಿವಾರ ಹೇಳಿದ್ದಾರೆ.

ಇರಾನ್ ಸೇನಾಧಿಕಾರಿ ಕಾಸಿಮ್ ಸುಲೈಮಾನಿಯ ಹತ್ಯೆಯನ್ನು ಸಮರ್ಥಿಸುತ್ತಾ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಆರೋಪವನ್ನು ಮಾಡಿದ್ದರು.

ಆದರೆ, ಅಮೆರಿಕದ ರಾಯಭಾರ ಕಚೇರಿಗಳ ಮೇಲೆ ಹೆಚ್ಚುವರಿ ದಾಳಿ ನಡೆಯುವ ಸಾಧ್ಯತೆಯಿದೆ ಎಂಬ ಟ್ರಂಪ್ ಹೇಳಿಕೆಯನ್ನು ನಾನು ಅನುಮೋದಿಸುತ್ತೇನೆ ಎಂದು ಸಿಬಿಎಸ್ ಸುದ್ದಿವಾಹಿನಿಯ ‘ಫೇಸ್ ದ ನೇಶನ್’ ಕಾರ್ಯಕ್ರಮದಲ್ಲಿ ಎಸ್ಪರ್ ಹೇಳಿದರು. ಆದರೆ, ಟ್ರಂಪ್ ‘ಫಾಕ್ಸ್ ನ್ಯೂಸ್’ಗೆ ನೀಡಿರುವ ಹೇಳಿಕೆಯು, ನಾಲ್ಕು ರಾಯಭಾರ ಕಚೇರಿಗಳ ಮೇಲೆ ದಾಳಿ ನಡೆಯುತ್ತದೆ ಎನ್ನುವ ನಿರ್ದಿಷ್ಟ ಬೇಹುಗಾರಿಕೆ ಮಾಹಿತಿಗಳನ್ನು ಆಧರಿಸಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News