ಅಕ್ರಮ ಸಾಗಾಟ ಆರೋಪ: ಐದು ಜಾನುವಾರು ವಶ

Update: 2020-01-13 16:40 GMT

ಬ್ರಹ್ಮಾವರ, ಜ.13: ಅಕ್ರಮವಾಗಿ ಬೊಲೆರೋ ವಾಹನದಲ್ಲಿ ಸಾಗಿಸುತ್ತಿದ್ದ ಆರೋಪದಲ್ಲಿ ಐದು ಜಾನುವಾರುಗಳನ್ನು ಪೊಲೀಸರು ಜ.13ರಂದು ನಸುಕಿನ ವೇಳೆ ಕಾಡೂರು ಗ್ರಾಮದ ಬೆಳ್ತಾಡಿ ಬಸ್ ನಿಲ್ದಾಣದ ಬಳಿ ವಶಪಡಿಸಿಕೊಂಡಿದ್ದಾರೆ.

ವಾಹನ ಚಾಲಕ ಹಾಗೂ ವಾಹನದಲ್ಲಿದ್ದ ಮೂವರು ಆರೋಪಿಗಳು ತಪ್ಪಿಸಿ ಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 11 ಸಾವಿರ ರೂ. ಮೌಲ್ಯದ ಒಟ್ಟು 5 ಜಾನುವಾರುಗಳು ಮತ್ತು 4,00,000 ರೂ.ಮೌಲ್ಯದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News