ಫೋಕಸ್ ರಾಘುಗೆ ಎಎಫ್‌ಐಎಪಿ ಡಿಸ್ಟಿಕ್ಷನ್ ಗೌರವ

Update: 2020-01-13 16:43 GMT

ಉಡುಪಿ, ಜ.13: ಉಡುಪಿಯ ವೃತ್ತಿಪರ ಛಾಯಾಗ್ರಾಹಕ ಫೋಕಸ್ ರಾಘು ವಿಶ್ವ ಫೋಟೊಗ್ರಫಿ ವಲಯದಲ್ಲಿ ಫ್ರಾನ್ಸಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಫೆಡರೇಶನ್ ಇಂಟರ್‌ನಾಶನಲ್ ಡೇ ಆರ್ಟ್ ಪೋಟೋಗ್ರಫಿಕ್ ಸಂಸ್ಥೆಯಿಂದ ಎಎಫ್‌ಐಎಪಿ ಡಿಸ್ಟಿಕ್ಷನ್ ಗೌರವವನ್ನು ಪಡೆದುಕೊಂಡಿದ್ದಾರೆ.

ಈ ಗೌರವದ ಹಿನ್ನೆಲೆಯಲ್ಲಿ ಇವರ ಕಲಾತ್ಮಕ ಛಾಯಾಚಿತ್ರಗಳು ಭಾರತ, ಸಿಂಗಪುರ್, ಫ್ರಾನ್ಸ್, ಇಂಗ್ಲೆಂಡ್, ಅಮೆರಿಕ, ಶ್ರೀಲಂಕಾ, ಗ್ರೀಕ್, ಕೆನಡಾ, ಚೀನಾ ಮುಂತಾದ ದೇಶಗಳ ಛಾಯಾಚಿತ್ರ ಸ್ಪರ್ಧೆಳಿಗೆ ಆಯ್ಕೆಯಾಗಿ ಪ್ರದರ್ಶನಗೊಂಡಿವೆ.

ಕಲಾತ್ಮಕ ಪಿಕ್ಟೋರಿಯಲ್ ಛಾಯಾಗ್ರಾಹಣ ವಿಭಾಗದಲ್ಲಿ ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಆಯ್ದ ಛಾಯಾಗ್ರಾಹಕರ ಸಾಧನೆ ಪರಿಗಣಿಸಿ ಈ ಪ್ರತಿಷ್ಠಿತ ಗೌರವವನ್ನು ನೀಡಲಾಗುತ್ತದೆ. ಕರಾವಳಿ ಭಾಗದಲ್ಲಿ ಈ ಗೌರವ ಪಡೆದ ಮೂರನೇ ಛಾಯಾಗ್ರಾಹಕ ಇವರಾಗಿದ್ದಾರೆ. ಇವರು ಕಳೆದ 19 ವರ್ಷಗಳಿಂದ ಹವ್ಯಾಸವಾಗಿ ಪಿಕ್ಟೋರಿಯಲ್, ವನ್ಯಜೀವಿ, ಟ್ರಾವಲ್ ಮತ್ತು ಸ್ಟ್ರೀಟ್ ಛಾಯಾಗ್ರಾಹಣವನ್ನು ಮಾಡುತ್ತಿದ್ದು, 15ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಮತ್ತು 50ಕ್ಕೂ ಹೆಚ್ಚು ರಾಷ್ಟ್ರ ಮತ್ತು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News