ಜ.18-19: ದ.ಕ. ಜಿಲ್ಲಾ ಮಟ್ಟದ ಯುವಜನ ಮೇಳ

Update: 2020-01-13 17:02 GMT

ಮಂಗಳೂರು, ಜ.13: ದ.ಕ. ಜಿಲ್ಲಾಡಳಿತ, ದ.ಕ.ಜಿಪಂ, ದ.ಕ.ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬೆಳ್ತಂಗಡಿ ತಾಪಂ, ಬಳಂಜ ಗ್ರಾಪಂ, ಜಿಲ್ಲಾ ಯುವಜನ ಒಕ್ಕೂಟ, ಬೆಳ್ತಂಡಗಿ ತಾಲೂಕು ಯುವಜನ ಒಕ್ಕೂಟ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ , ಹಾಗೂ ಶ್ರೀ ಉಮಾಮೇಶ್ವರ ಯುವಕ ಮಂಡಲ  ಬಳಂಜ ಇವುಗಳ ಸಂಯುಕ್ತ ಆಶ್ರಯದಲ್ಲಿ 2019-20ನೇ ಸಾಲಿನ ಜಿಲ್ಲಾ ಮಟ್ಟದ ಯುವಜನ ಮೇಳವು ಜ.18 ರಿಂದ 19ರವರೆಗೆ ಬಳಂಜ ಸರಕಾರಿ ಶಾಲೆಯಲ್ಲಿ ನಡೆಯಲಿದೆ.

ಮೇಳದಲ್ಲಿ ಭಾವಗೀತೆ (ವೈಯಕ್ತಿಕ) 3 ನಿಮಿಷ, ಲಾವಣಿ (ವೈಯಕ್ತಿಕ) 4 ನಿಮಿಷ, ರಂಗಗೀತೆ (ವೈಯಕ್ತಿಕ) 3 ನಿಮಿಷ, ಏಕಪಾತ್ರಾಭಿನಯ (ವೈಯಕ್ತಿಕ) 5 ನಿಮಿಷ, ತುಳು ಭಾವಗೀತೆ (ವೈಯಕ್ತಿಕ) 3 ನಿಮಿಷ, ಗೀಗೀಪದ 5 ಜನ 4 ನಿಮಿಷ, ಜಾನಪದ ಗೀತೆ 6 ಜನ 4 ನಿಮಿಷ, ಜಾನಪದ ನೃತ್ಯ 12 ಜನ 10 ನಿಮಿಷ, ಕೋಲಾಟ 12 ಜನ 6 ನಿಮಿಷ, ಭಜನೆ 8 ಜನ 7 ನಿಮಿಷ, ತುಳು ಪಾಡ್ದನ 2 ಜನ 3 ನಿಮಿಷ, ತುಳು ಜಾನಪದ ನೃತ್ಯ 10 ಜನ 10 ನಿಮಿಷ, ರಾಗಿ/ಜೋಳ ಬೀಸುವ ಪದ (ಯುವತಿಯರಿಗೆ ಮಾತ್ರ) 2 ಜನ 3 ನಿಮಿಷ, ಸೋಬಾನೆ ಪದ (ಯುವತಿಯರಿಗೆ ಮಾತ್ರ) 4 ಜನ 5 ನಿಮಿಷ, ವೀರಗಾಸೆ (ಯುವಕರಿಗೆ ಮಾತ್ರ) 12 ಜನ 10 ನಿಮಿಷ, ಡೊಳ್ಳುಕುಣಿತ (ಯುವಕರಿಗೆ ಮಾತ್ರ) 12 ಜನ 10 ನಿಮಿಷ, ದೊಡ್ಡಾಟ (ಯುವಕರಿಗೆ ಮಾತ್ರ) 15 ಜನ 45 ನಿಮಿಷ, ಸಣ್ಣಾಟ (ಯುವಕರಿಗೆ ಮಾತ್ರ) 12 ಜನ 30 ನಿಮಿಷ, ಯಕ್ಷಗಾನ (ಯುವಕರಿಗೆ ಮಾತ್ರ) 15 ಜನ 45 ನಿಮಿಷ, ಚರ್ಮವಾದ್ಯ ಮೇಳ (ಯುವಕರಿಗೆ ಮಾತ್ರ) 6 ಜನ 10 ನಿಮಿಷದ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಈ ಯುವಜನ ಮೇಳದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಣಿಗೊಂಡ ಜಿಲ್ಲೆಯ ಕ್ರೀಯಾಶೀಲ ಯುವಕ/ಯುವತಿ ಮಂಡಲದ 15 ರಿಂದ 35 ವರ್ಷದೊಳಗಿನ ಸದಸ್ಯರುಗಳು ಭಾಗವಹಿಸಬಹುದು. ಆಸಕ್ತರು ಜ.18ರಂದು ಬೆಳಗ್ಗೆ 9 ಗಂಟೆಗೆಯೊಳಗೆ ಸಂಘಟಕರಲ್ಲಿ ದೂ.ಸಂ: 9901304348, 7975352686, 9480858238, 8971076439 ಮೂಲಕ ಸಂಪರ್ಕಿಸಿ ಹೆಸರುಗಳನ್ನು ನೋಂದಾಯಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News