ಸಿಎಎಯಿಂದ ದಲಿತ ಆದಿವಾಸಿ ಸಮುದಾಯಗಳ ಬದುಕಿಗೆ ಅತಂತ್ರ: ರವಿಚಂದ್ರ ಕೊಪ್ಪಲಕಾಡು

Update: 2020-01-13 17:05 GMT

ಮಂಗಳೂರು, ಜ.13: ದೇಶವನ್ನು ಆಳುತ್ತಿರುವ ಜನವಿರೋಧಿ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರವು ದಲಿತ ಆದಿವಾಸಿ ಸಮುದಾಯದ ಬದುಕಿನ ಮೇಲೆ ನಿರಂತರ ಕುದುರೆ ಸವಾರಿ ಮಾಡುತ್ತಿದೆ. ಪ್ರಸ್ತುತ ಪೌರತ್ವ ತಿದ್ದುಪಡಿ ಮಸೂದೆಯಿಂದ ಈ ದೇಶದ ಮೂಲನಿವಾಸಿಗಳಾದ ದಲಿತ-ಆದಿವಾಸಿ-ಬುಡಕಟ್ಟು ಸಮುದಾಯಗಳ ಬದುಕು ಅತಂತ್ರವಾಗಲಿದೆ ಎಂದು ರವಿಚಂದ್ರ ಕೊಪ್ಪಲ ಕಾಡು ಹೇಳಿದರು.

ದಲಿತ ಹುಕ್ಕುಗಳ ಸಮಿತಿಯ ಕೊಂಚಾಡಿ ಘಟಕದ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸರ್ವ ಜನಾಂಗದ ಶಾಂತಿಯ ತೋಟ ಆಗಿರುವ ಭಾರತವನ್ನು ಮತ ಧರ್ಮಗಳ ಆಧಾರದ ಮೇಲೆ ವಿಘಟನೆ ಮಾಡುವ ಸಂಘ ಪರಿವಾರದ ಕುತಂತ್ರವನ್ನು ಈ ಮಣ್ಣಿನ ಮೂಲನಿವಾಸಿಗಳಾದ ದಲಿತರು, ಆದಿವಾಸಿಗಳು ಸೋಲಿಸಬೇಕೆಂದು ಕರೆ ನೀಡಿದರು.

ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ತಿಮ್ಮಯ್ಯ ಕೊಂಚಾಡಿ, ನಗರ ಕಾರ್ಯದರ್ಶಿ ಕೃಷ್ಣ ತಣ್ಣೀರುಬಾವಿ, ಡಿವೈಎಫ್‌ಐ ನಗರಾಧ್ಯಕ್ಷ ನವೀನ್ ಬೊಲ್ಪುಗುಡ್ಡೆ, ಕಟ್ಟಡ ಕಾರ್ಮಿಕರ ಸಂಘಟನೆಯ ನಾಯಕರಾದ ಚಂದ್ರಹಾಸ್, ದಯಾನಂದ ಶೆಟ್ಟಿಗಾರ್, ಶಶಿಕುಮಾರ್ ಗುಂಡಳಿಕೆ ಮಾತನಾಡಿದರು. ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ನಾರಾಯಣ ಕೊಂಚಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಡಿಎಚ್‌ಎಸ್ ನಗರ ಸಮಿತಿ ಸದಸ್ಯ ಪ್ರವೀಣ್ ಕೊಂಚಾಡಿ ವರದಿ ವಾಚಿಸಿದರು. ಪಾಂಡುರಂಗ ಕೆ. ಸ್ವಾಗತಿಸಿದರು. ದೊಂಬಯ್ಯ ಕೆ. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News