ದಾರುನ್ನೂರ್ : ಪಿ.ಯು.ಸಿ ವಿಭಾಗ ಉದ್ಘಾಟನೆ, ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

Update: 2020-01-13 17:11 GMT

ಮೂಡುಬಿದಿರೆ: ಶಹೀದ್ ಸಿ.ಎಂ. ಅಬ್ದುಲ್ಲಾ ಮುಸ್ಲಿಯಾರ್ ಫೌಂಡೇಶನ್ ಕರ್ನಾಟಕ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಕಾಶಿಪಟ್ಟದ ದಾರನ್ನೂರ್ ಎಜುಕೇಶನ್ ಸೆಂಟರ್ ಶಿಕ್ಷಣ ಸಂಸ್ಥೆಯಲ್ಲಿ ಪಿ.ಯು.ಸಿ ವಿಭಾಗದ ಉದ್ಘಾಟನಾ ಕಾರ್ಯಕ್ರಮ ಮತ್ತು ನೂತನ ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.

ಪಿ.ಯು.ಸಿ ವಿಭಾಗದ ಉದ್ಘಾಟನೆಯನ್ನು ದಾರುನ್ನೂರ್ ನಿರ್ದೇಶಕರು ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಎಸ್ ಮಹಮ್ಮದ್ ಮಸೂದ್ ಹಾಜಿ ಹಾಗು ಕಟ್ಟಡ ಶಂಕುಸ್ಥಾಪನೆಯನ್ನು ಸಂಸ್ಥೆಯ ಅಧ್ಯಕ್ಷ, ದ.ಕ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಅಲ್-ಅಝರಿ ನೆರವೇರಿಸಿದರು.

ಈ ಸಂದರ್ಭ ಉಪಾಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್, ಬಂದರ್, ಹಾಸ್ಕೋ ಅಬ್ದುರಹಿಮಾನ್ ಹಾಜಿ, ಡಿ.ಎ ಉಸ್ಮಾನ್ ಹಾಜಿ ತೋಡಾರು, ಎ. ಮೊಯಿದ್ದೀನ್ ಹಾಜಿ, ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಲ್ ರಝಾಕ್ ಬಿ.ಸಿ ರೋಡ್, ಜೊತೆ ಕಾರ್ಯದರ್ಶಿ ಸಮದ ಹಾಜಿ, ನೌಷಾದ್ ಹಾಜಿ, ಫಕೀರಬ್ಬ ಮಾಸ್ಟರ್, ಹಾಜಿ ಎಂ.ಜೆ ಮುಹಮ್ಮದ್ ತೋಡಾರ್, ಹಸನ್ ಕುಟ್ಟಿ, ಇಕ್ಷಾಲ್ ಇಂಜಿನಿಯರ್, ಮುಹಮ್ಮದ್ ಮಿಜಾರ್ ಹಾಗೂ ಸಂಸ್ಥೆಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮತ್ತು ವ್ಯವಸ್ಥಾಪಕ ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News