ಕಾವಳಕಟ್ಟೆ ಉರ್ದು ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ

Update: 2020-01-14 17:21 GMT

ಬಂಟ್ವಾಳ, ಜ.14: ತಾಲೂಕಿನ ದ.ಕ.ಜಿ.ಪಂ. ಉನ್ನತೀಕರಿಸಿದ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕಾವಳಕಟ್ಟೆಯಲ್ಲಿ ಇತ್ತೀಚೆಗೆ ಪ್ರತಿಭಾ ಪುರಸ್ಕಾರ ಹಾಗೂ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಜರುಗಿತು.

 ಈ ಸಂದರ್ಭದಲ್ಲಿ ಕೆದ್ದಳಿಕೆ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ರಮೇಶ್ ನಾಯ್ಕ, ವಗ್ಗ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಶೇಖ್ ಆದಂ, ಶಿಕ್ಷಕಿ ಮಮತಾ, ಹಿದಾಯ ಫೌಂಡೇಶನ್‌ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ, ಉರ್ದು ಶಾಲೆ ಕಾವಳಕಟ್ಟೆ ಇದರ ಮುಖ್ಯ ಶಿಕ್ಷಕ ಹಸನ್ ಬಾಗ್ಬಾನ್, ಗುತ್ತಿಗೆದಾರ ರಿಯಾಝ್, ಪಿಡಬ್ಲುಡಿ ಇಂಜಿನಿಯರ್ ಕೃಷ್ಣಾ ಇವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿಗಳಿಂದ ಕವಾಲಿ, ನಾಥ್, ಹಮ್ದ್, ನೃತ್ಯ, ಕಿರಾಅತ್ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು, 4ನೇ ತರಗತಿಯ ವಿಕಲಚೇತನ ವಿದ್ಯಾರ್ಥಿನಿ ರುಮೈಝಾ ನೃತ್ಯ ಮತ್ತು ಹಾಡು ನೋಡುಗರನ್ನು ಆಕರ್ಷಿಸಿತ್ತು. 

ಸಭಾ ಕಾರ್ಯಕ್ರಮದಲ್ಲಿ ಮೌಲಾನಾ ಮುಹಮ್ಮದ್ ಸಾಖವಿ ಬಾಖವಿ, ವೌಲಾನಾ ಮುಹಮ್ಮದ್ ಫಾಝಿಲ್ ರಝ್ವಿ, ಮಾಜಿ ಸಚಿವ ರಮಾನಾಥ ರೈ, ಪದ್ಮಶೇಖರ್ ಜೈನ್, ಚಂದ್ರಹಾಸ ಕರ್ಕೇರ, ಅಬ್ಬಾಸ್ ಅಲಿ, ಧನಲಕ್ಷ್ಮೀ ಬಂಗೇರ, ಇಸ್ಮಾಯಿಲ್ ರಝಾ, ಅಬ್ದುಲ್ ನಝೀರ್, ಸಂತೋಷ್ ಪೂಂಜಾ, ಇಸ್ಮಾಯಿಲ್ ಸಿದ್ದೀಖ್, ಮೋಹನ ಆಚಾರಿ, ತನ್ವೀರ್, ಮುಹಮ್ಮದ್ ಹನೀಫ್, ಅಬೂಬಕರ್, ಖಾದರ್ ಸಾಹೇಬ್ ಇಚ್ಚಿಲ, ಗುತ್ತಿಗೆದಾರ ರಿಯಾಝ್, ಇಸ್ಮಾಯಿಲ್, ಹನೀಫ್ ದೂಮಲಿಕೆ, ಮಾಯಿಲಪ್ಪ, ರಿಯಾಝ್ ಕೈಲಾರ್, ವೆಂಕಪ್ಪ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ಖಲೀಲ್ ಅಹ್ಮದ್ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಶಿಕ್ಷಕ ರಿಯಾಝ್ ಹಾಗೂ ರಾಜೀವ್ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News