ಟಿಡಿಎಫ್‌ನಲ್ಲಿ ಹಿರಿಯ ನಾಗರಿಕರ ಸಂಭ್ರಮಾಚರಣೆ
ಮಂಗಳೂರು, ಜ.14: ಪ್ರತಿಯೊಬ್ಬ ಹಿರಿಯ ನಾಗರಿಕರೂ ತಮ್ಮ ಬಗ್ಗೆ ಕಾಳಜಿ, ಪ್ರೀತಿ ಹಾಗೂ ಗೌರವವನ್ನು ಅಪೇಕ್ಷಿಸುತ್ತಾರೆ. ಈ ಅನುಭವನ್ನು ಟಿಡಿಎಫ್ ಡೈಮಂಡ್ಸ್ ಮತ್ತು ಗೋಲ್ಡ್‌ನ ಆಡಳಿತ ನಿರ್ದೇಶಕರು ಮತ್ತು ಸಹ ಸಂಸ್ಥಾಪಕರಾದ ಅಡ್ವೆ ಪ್ರಸನ್ನ ಶೆಟ್ಟಿ ಮತ್ತು ಗೌತಮ್ ಜೈನ್ ಸಿಂಘಿ ರವಿವಾರ ತಮ್ಮದಾಗಿಸಿಕೊಂಡಿದ್ದಾರೆ.
ದೇರಳಕಟ್ಟೆ ಬೆಳ್ಮದ ಮಹಿಳೆಯರಿಗಾಗಿನ ಹಿರಿಯ ನಾಗರಿಕರ ಸೇವಾಶ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಲ್ಲಿನ ಹಿರಿಯ ನಾಗರಿಕರನ್ನು ಗೌರವಿಸಲಾಯಿತು.
‘‘ನಮ್ಮ ವೃತ್ತಿಪರ ಹಾಗೂ ವೈಯಕ್ತಿಕ ಜೀವನದ ಪ್ರಮುಖ ಭಾಗ ಮಹಿಳೆಯರು. ಅವರನ್ನು ಗೌರವಿಸುವ ಮೂಲಕ ಅವರನ್ನು ಸಂತಪಡಿಸಬಹುದು ಎಂಬುದು ನನ್ನ ಅನಿಸಿಕೆ. ನಾವು ಪಡೆದುಕೊಂಡಿರುವುದರಲ್ಲಿ ಸಣ್ಣ ಭಾಗವನ್ನು ಹಿಂತಿರುಗಿಸುವಲ್ಲಿ ನಾವು ಯಸಸ್ವಿಯಾಗಿದ್ದೇವೆ’’ ಎಂದು ಪ್ರಸನ್ನ ಶೆಟ್ಟಿ ಅಭಿಪ್ರಾಯಿಸಿದ್ದಾರೆ.
‘‘ಮಹಿಳೆಯರು ದೇವಿ ಲಕ್ಷ್ಮಿಯ ಅವತಾರ ಎಂಬುದನ್ನು ನಮ್ಮ ಶ್ರೀಮಂತ ಭಾರತೀಯ ಸಂಸ್ಕೃತಿಯಿಂದ ನಾವು ಕಲಿತಿದ್ದೇವೆ. ಒಮ್ಮೆ ಈ ಸದೃಢ ಮಹಿಳೆಯರು ನಮಗೆ ಆಶೀರ್ವದಿಸಿದರೆಂದರೆ ಟಿಡಿಎಫ್ ಎಂದೆಂದಿಗೂ ಆಶೀರ್ವಾದ ಪಡೆದಂತೆ ಎಂಬುದು ನಮ್ಮ ಅನಿಸಿಕೆ’’ ಎಂದು ಗೌತಮ್ ಜೈನ್ ಸಿಂಘಿ ಹೇಳಿದ್ದಾರೆ.
ವಜ್ರ, ಚಿನ್ನ ಹಾಗೂ ಅನ್‌ಕಟ್ ಜದಾವು ಆಭರಣಗಳ ಉತ್ಪಾದಕರು ಹಾಗೂ ರಖಂ ಮಾರಾಟಗಾರ ಸಂಸ್ಥೆಯಾಗಿರುವ ಟಿಡಿಎಫ್ ಮುಂಬೈನಲ್ಲಿ 4 ರಿಟೇಲ್ ಮಳಿಗೆಗಳು ಮತ್ತು ಮಂಗಳೂರಿನ ಫಳ್ನಿೀರ್‌ನಲ್ಲಿ 1 ಮಳಿಗೆಯನ್ನು ಹೊಂದಿದೆ. ಪ್ರಸ್ತುತ ಟಿಡಿಎಫ್‌ನಲ್ಲಿ ಜನವರಿ 19ರವರೆಗೆ ವಿಶೇಷ ನೆಕ್ಲೇಸ್ ಹಾಗೂ ಬಳೆಗಳ ಉತ್ಸವ ನಡೆಯುತ್ತಿದೆ. ಈ ಸಂದರ್ಭದಲ್ಲಿ, ಹಿರಿಯ ಮಹಿಳಾ ನಾಗರಿಕರಿಗೆ ಘನೆತೆಯ ಜೀವನಕ್ಕೆ ಸಹಕರಿಸುತ್ತಿರುವ ಸೇವಾ ಭಾವ ಚಾರಿಟೆಬಲ್ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಹಾಗೂ ಸಮಾಜ ಸೇವಕಿ ಡಾ. ಗೀತಾ ಆರ್. ಶೆಟ್ಟಿ ಅವರ ಜತೆಯಲ್ಲಿ ಹಿರಿಯ ಮಹಿಳಾ ನಾಗರಿಕರಿಗೆ ಟಿಡಿಎಫ್ ಮಳಿಗೆಯಲ್ಲಿ ಗೌರವಿಸುವ ಅವಕಾಶಕ್ಕೆ ಮನವಿ ಮಾಡಲಾಯಿತು.
ಡಾ. ಗೀತಾ ಆರ್. ಶೆಟ್ಟಿ ಯುವ ಜನತೆಗೆ ಮಾದರಿಯಾಗಿದ್ದು, ಅವರು ತಮ್ಮ ಜೀವನದಲ್ಲಿ ಮಾಡಿರುವ ಸಾಧನೆಗಾಗಿ ಅವರನ್ನು ಟಿಡಿಎಫ್‌ನಿಂದ ಗೌರವಿಸಲಾಯಿತು. ವಿಭಿನ್ನ ಹಿನ್ನೆಲೆಯಿಂದ ಕೂಡಿದ ಹಿರಿಯ ಮಹಿಳೆಯರು ಈ ಸಂಭ್ರಮವನ್ನು ವಿಶೇಷವಾಗಿ ಪರಿಗಣಿಸಿದರಲ್ಲದೆ, ಟಿಡಿಎಫ್‌ನ ಉತ್ತಮ ಭವಿಷ್ಯಕ್ಕಾಗಿ ಅಭಿನಂದಿಸಿ, ಆಶೀರ್ವದಿಸಿದರು.