ಕಿನ್ಯ: ಅಂಗನವಾಡಿ ಕೇಂದ್ರ ಉದ್ಘಾಟನೆ

Update: 2020-01-15 05:09 GMT

ಉಳ್ಳಾಲ: ಇಂದಿರಾಗಾಂಧಿ ತಂದ ಯೋಜನೆ ಅಂಗನವಾಡಿಯಾಗಿದೆ. ಮೀಂಪ್ರಿ ಭಾಗದಲ್ಲಿ ತಲೆ ಎತ್ತಿ ನಿಂತ ಅಂಗನವಾಡಿ ಯಿಂದ  ಈ ಭಾಗದ ಮಕ್ಕಳು ಉತ್ತಮ ಪ್ರಜೆಗಳಾಗಿ ಬೆಳೆಯಲು ಅಡಿಪಾಯ ಆಗಲಿ ಎಂದು ಶಾಸಕ ಯು.ಟಿ ಖಾದರ್ ಅಭಿಪ್ರಾಯ ಪಟ್ಟರು.

ಅವರು ಕಿನ್ಯಾ ಮಿಂಪ್ರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ವತಿಯಿಂದ ನಿರ್ಮಿಸಲಾದ ಅಂಗನವಾಡಿ ಕೇಂದ್ರವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರ  ಸ್ಥಾಪನೆಗೆ ಪ್ರಯತ್ನಿಸಿದ ಕಿನ್ಯ ಗ್ರಾ.ಪಂ ಸದಸ್ಯ ಹಮೀದ್ ಕಿನ್ಯಾ ಅವರನ್ನು ಸನ್ಮಾನಿಸಲಾಯಿತು. 

ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು, ಕಿನ್ಯ ಗ್ರಾ.ಪಂ ಅಧ್ಯಕ್ಷೆ ಮಾಲಿನಿ , ಅಭಿವೃದ್ಧಿ ಅಧಿಕಾರಿ ನವೀನ್ ಹೆಗ್ಡೆ, ಕೋಟೆಕಾರು ಸೇವಾ ಸಹಕಾರಿ ಬ್ಯಾಂಕ್‍ನ ನಿರ್ದೇಶಕ ಎಂ.ಎ ಮಹಮ್ಮದ್ ಬಶೀರ್, ಕಿನ್ಯ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಮೀಂಪ್ರಿ ತಂಞಳ್, ಮೀಂಪ್ರಿ ಮಸೀದಿ ಕಾರ್ಯದರ್ಶಿ ಹಮೀದ್, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಜಿಲ್ಲಾ ಅಧ್ಯಕ್ಷ ಎನ್. ಎಸ್ ಕರೀಂ,  ಕಿನ್ಯಾ ಗ್ರಾ.ಪಂ ಸದಸ್ಯರಾದ ಮಹಾಬಲ ಪೂಂಜ, ಮಹಮ್ಮದ್, ಆಶಲತಾ, ಆಸಿಯಮ್ಮ, ಕಾಂಗ್ರೆಸ್ ಬೂತ್ ಅಧ್ಯಕ್ಷ ಹಮೀದ್, ಮಂಜನಾಡಿ ಗ್ರಾ.ಪಂ ಅಧ್ಯಕ್ಷ ಮಹಮ್ಮದ್ , ಸದಸ್ಯ ಕೆ.ಪಿ ಅಶ್ರಫ್,  ಕಿನ್ಯಾ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಅಹಮ್ಮದ್ ಬಾವಾ, ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್‍ನ ಹನೀಫ್ , ಅಂಗನವಾಡಿ ಮೇಲ್ವಿಚಾರಕಿಯರಾದ ಶಾರದಾ ಕೆ.,  ಕಲ್ಪನಾ, ಭವ್ಯಾ,  ಅಂಗನವಾಡಿ ಶಿಕ್ಷಕಿ ರೇವತಿ , ಸಹಾಯಕಿ ಸುಜಾತಾ , ಸ್ಥಳೀಯರಾದ ಜಗದೀಶ, ನವೀನ,   ರಫೀಕ್ ಮೀಂಪ್ರಿ,  ಸಿದ್ದೀಖ್ ಉಚ್ಚಿಲ್,  ಎನ್.ಕೆ ಬಾವಾ, ಉಪಸ್ಥಿತರಿದ್ದರು.

ಹಮೀದ್ ಕಿನ್ಯ ಸ್ವಾಗತಿಸಿದರು. ಅಂಗನವಾಡಿ ಮೇಲ್ವಿಚಾರಕಿ ಶಾರದಾ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News