ನಿರ್ಭಯಾ ಪ್ರಕರಣ: ಗಲ್ಲು ಶಿಕ್ಷೆ ಬದಿಗೆ ಸರಿಸಲು ನಿರಾಕರಿಸಿದ ದಿಲ್ಲಿ ಹೈಕೋರ್ಟ್
Update: 2020-01-15 16:45 IST
ಹೊಸದಿಲ್ಲಿ: ನಿರ್ಭಯಾ ಪ್ರಕರಣದ ನಾಲ್ಕು ಮಂದಿ ಅಪರಾಧಿಗಳಿಗೆ ಈಗಾಗಲೇ ಪಟಿಯಾಲ ಹೌಸ್ ಕೋರ್ಟ್ ಘೋಷಿಸಿರುವ ಗಲ್ಲು ಶಿಕ್ಷೆಯ ಆದೇಶವನ್ನು ಬದಿಗೆ ಸರಿಸಲು ದಿಲ್ಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ. ಆರೋಪಿಗಳಲ್ಲೊಬ್ಬಾತ ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿರುವುದರಿಂದ ಈಗಾಗಲೇ ಘೋಷಿಸಿದಂತೆ ಜನವರಿ 22ರಂದು ಗಲ್ಲು ಶಿಕ್ಷೆ ನೆರವೇರಲು ಸಾಧ್ಯವಾಗುವುದಿಲ್ಲ ಎಂದು ದಿಲ್ಲಿ ಸರಕಾರ ನ್ಯಾಯಾಲಯಕ್ಕೆ ಹೇಳಿರುವ ಹೊರತಾಗಿಯೂ ಹೈಕೋರ್ಟ್ ಮೇಲಿನಂತೆ ಹೇಳಿದೆ.
ಗಲ್ಲು ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯಕ್ಕೆ ತಾನು ಸಲ್ಲಿಸಿರುವ ಕ್ಷಮಾದಾನ ಅರ್ಜಿಯ ಮಾಹಿತಿ ನೀಡಿ ಆತ ಮನವಿ ಸಲ್ಲಿಸಬಹುದು ಎಂದೂ ಹೈಕೋರ್ಟ್ ಹೇಳಿದೆ.
ನಾಲ್ಕು ಮಂದಿ ಅಪರಾಧಿಗಳಾದ ವಿನಯ್ ಶರ್ಮ, ಮುಕೇಶ್ ಕುಮಾರ್, ಅಕ್ಷಯ್ ಕುಮಾರ್ ಸಿಂಗ್ ಹಾಗೂ ಪವನ್ ಗುಪ್ತಾ ಅವರ ಪೈಕಿ ಮುಕೇಶ್ ಸಿಂಗ್ ಮಂಗಳವಾರ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ.