×
Ad

ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಗರ್ಭಿಣಿ ಪ್ರಯಾಣಿಸುತ್ತಿದ್ದ ಆಟೊ: ಆಪತ್ಬಾಂಧವರಾದ ಸ್ವಯಂಸೇವಕರು

Update: 2020-01-15 22:32 IST

ಮಂಗಳೂರು, ಜ.15: ರಾ.ಹೆ.75ರ ರಸ್ತೆಯಲ್ಲಿ ಗರ್ಭಿಣಿ ಪ್ರಯಾಣಿಸುತ್ತಿದ್ದ ಆಟೊ ರಿಕ್ಷಾ ಸಿಕ್ಕಿ ಹಾಕಿಕೊಂಡು ಪ್ರಯಾಸ ಪಡುತ್ತಿದ್ದ ವೇಳೆ ಮುಸ್ಲಿಂ ಸಂಘಟನೆಯ ಸ್ವಯಂ ಸೇವಕರು ರಿಕ್ಷಾವನ್ನು ಮತ್ತೊಂದು ಬದಿಯ ರಸ್ತೆಗೆ ಸ್ಥಳಾಂತರ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ನಗರದ ಹೊರವಲಯದ ಅಡ್ಯಾರ್-ಕಣ್ಣೂರಿನಲ್ಲಿ ಬುಧವಾರ ನಡೆದ ಬೃಹತ್ ಜನಜಾಗೃತಿ ಸಮಾವೇಶಕ್ಕೆ ಲಕ್ಷಕ್ಕೂ ಮಿಕ್ಕ ಜನತೆ ತೆರಳುತ್ತಿತ್ತು. ಈ ನಡುವೆ ಗರ್ಭಿಣಿ ಪ್ರಯಾಣಿಸುತ್ತಿದ್ದ ಆಟೊ ರಿಕ್ಷಾ ಮಾರ್ಗಮಧ್ಯೆ ಸಿಕ್ಕಿಹಾಕಿಕೊಂಡಿತು. ಸಂಚಾರ ಅಸ್ತವ್ಯಸ್ತಗೊಂಡಿದ್ದರಿಂದ ಗರ್ಭಿಣಿಯು ಸಾಕಷ್ಟ ಪ್ರಯಾಸ ಪಡುತ್ತಿರುವುದನ್ನು ಗಮನಿಸಿದ ಸ್ವಯಂ ಸೇವಕರು, ಒಂದು ರಸ್ತೆಯಲ್ಲಿದ್ದ ಆಟೊ ರಿಕ್ಷಾವನ್ನು ಮತ್ತೊಂದು ಬದಿಗೆ ಎತ್ತಿ ಹಿಡಿದು ಸ್ಥಳಾಂತರಿಸಿದರು. 21 ಸೆಕೆಂಡ್ ಇರುವ ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಯುವಕರ ಮಾನವೀಯ ಕಾಳಜಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News