ಅಂತರ್ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟ: ಆಳ್ವಾಸ್‍ಗೆ 'ಸುಭಾಸ್‍ನಗರ ಫ್ರೆಂಡ್ಸ್ ಟ್ರೋಫಿ'

Update: 2020-01-15 17:30 GMT

ಮೂಡುಬಿದಿರೆ: ಸುಭಾಸ್ ನಗರ ಫ್ರೆಂಡ್ಸ್ ಕ್ಲಬ್ ಮೂಡುಬಿದಿರೆ ಇದರ ಆಶ್ರಯದಲ್ಲಿ  ಪುರಸಭೆಯ ಮಾಜಿ ಅಧ್ಯಕ್ಷ ರತ್ನಾಕರ ದೇವಾಡಿಗ ಅವರ ಸ್ಮರಣಾರ್ಥ ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ  ನಡೆದ ಆಹ್ವಾನಿತ ಅಂತರ್ ರಾಜ್ಯ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ `ಸುಭಾಸ್‍ನಗರ ಫ್ರೆಂಡ್ಸ್ ಟ್ರೋಫಿ'ಯನ್ನು ಆಳ್ವಾಸ್ ತಂಡ ಗೆದ್ದುಕೊಂಡಿದೆ.

ಪ್ರಥಮ ಬಹುಮಾನ ರೂ 30 ಸಾವಿರ ನಗದು ಮತ್ತು ಟ್ರೋಫಿಯನ್ನು ಒಳಗೊಂಡಿದೆ. ರೂ 20 ಸಾವಿರ ನಗದು ಹಾಗೂ ಟ್ರೋಪೀಯೊಂದಿಗೆ ಮಾರಿಗುಡಿ ಮೂಡುಬಿದಿರೆ ತಂಡ ದ್ವಿತೀಯ ಸ್ಥಾನ ಗೆದ್ದುಕೊಂಡಿದೆ. ತೃತೀಯ ಬಹುಮಾನ ರೂ 10 ಸಾವಿರ ನಗದು ಹಾಗೂ ಟ್ರೋಫಿಯೊಂದಿಗೆ ಮೂಡುಬಿದಿರೆ ಪಾಪ್ಯುಲರ್ ತಂಡ ಜಯಗಳಿಸಿದರೆ, ರೂ ಐದು ಸಾವಿರ ನಗದು ಹಾಗೂ ಟ್ರೋಫಿಯೊಂದಿಗೆ ಜಿ.ಕೆ ಫ್ರೆಂಡ್ಸ್ ನಾಲ್ಕನೇ ಸ್ಥಾನವನ್ನು ಪಡಕೊಂಡಿದೆ.

ಜಿ.ಪಂ.ಸದಸ್ಯ ಕೆ.ಪಿ.ಸುಚರಿತ ಶೆಟ್ಟಿ, ವಕೀಲರ ಸಂಘದ ಅಧ್ಯಕ್ಷ ಬಾಹುಬಲಿ ಪ್ರಸಾದ್, ಆಳ್ವಾಸ್‍ನ ಟ್ರಸ್ಟಿ ಡಾ.ವಿನಯ ಆಳ್ವ, ಉಮಾನಾಥ ಸಿ.ಮೊಯಿಲಿ, ರವೀಶ್ ಕುಮಾರ್ ಸುಭಾಷ್‍ನಗರ, ಮತ್ತಿತರರ ಪ್ರಮುಖರು ವಿಜೇತರಿಗೆ ಬಹುಮಾನ ವಿತರಿಸಿದರು.

ಇದಕ್ಕು ಮೊದಲು ನಡೆದ ಸಭಾ ಕಾರ್ಯಕ್ರಮವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಿ `ರತ್ನಾಕರ ದೇವಾಡಿಗ ಸ್ನೇಹ ಜೀವಿ ಮತ್ತು ಕ್ರಿಯಾಶೀಲ ರಾಜಕಾರಣಿ ಎಂದರು. ಮಾಜಿ ಸಚಿವ ರಮಾನಾಥ ರೈ ಟ್ರೋಫಿ ಅನಾವರಣಗೊಳಿಸಿದರು. 

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ `ರತ್ನಾಕರ ದೇವಾಡಿಗ ಓರ್ವ ಆದರ್ಶ ವ್ಯಕ್ತಿ. ಪುರಸಭೆ ಅಧ್ಯಕ್ಷರಾಗಿದ್ದಾಗ ಘನತ್ಯಾಜ್ಯ ನಿರ್ವಹಣೆ ಘಟಕ ಆರಂಭಿಸಿ ಸ್ವಚ್ಚ ಮೂಡುಬಿದಿರೆಗೆ ಚಾಲನೆ ಕೊಟ್ಟವರು' ಎಂದರು.

ಪುರಸಭೆಯ ಪೌರಕಾರ್ಮಿಕರನ್ನು, ಮೆಸ್ಕಾಂ ಲೇನ್‍ಮೇನ್‍ಗಳನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು, ಕ್ರೀಡಾಪಟುಗಳನ್ನು ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಡಿ,ಜೆ ಕನ್ನಡ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ವೈ.ಶಶಿಕಾಂತ್ ಜೈನ್, ಜವನೆರ್ ಬೆದ್ರ ಇದರ ಸ್ಥಾಪಕ ಅಧ್ಯಕ್ಷ, ಅಮರ್ ಕೋಟೆ, ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್‍ನ ಸಂಚಾಲಕ ಸಂತೋಷ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಜಿ.ಪಂ ಸದಸ್ಯರಾದ ಕೆ.ಪಿ ಸುಚರಿತ ಶೆಟ್ಟಿ, ಧರಣೇಂದ್ರ ಕುಮಾರ್, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ, ತಹಶೀಲ್ದಾರ್ ಅನಿತಾ ಲಕ್ಷ್ಮಿ, ಪುರಸಭೆ ಮುಖ್ಯಾಧಿಕಾರಿ ಇಂದು, ಕೆಪಿಸಿಸಿ ಸದಸ್ಯ ಆರ್.ಕೆ ಪ್ರಥ್ವಿರಾಜ್, ಕದ್ರಿ ದಿನೇಶ್ ದೇವಾಡಿಗ, ಉದ್ಯಮಿ ತಿಮ್ಮಯ್ಯ ಶೆಟ್ಟಿ, ಮೇಘನಾದ ಶೆಟ್ಟಿ, ವಕೀಲ ಶಾಂತಿ ಪ್ರಸಾದ್ ಹೆಗ್ಡೆ, ಮೂಡುಬಿದಿರೆ ದೇವಾಡಿಗರ ಸಂಘದ ಅಧ್ಯಕ್ಷ ಶಶಿಧರ ದೇವಾಡಿಗ, ರತ್ನಾಕರ ದೇವಾಡಿಗ ಅವರ ಪತ್ನಿ ಭಾರತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಜಿ.ಕೆ ಡೆಕೊರೇಟರ್ಸ್‍ನ ಗಣೇಶ್ ಕಾಮತ್, ಪುರಸಭಾ ಸದಸ್ಯ ಸುರೇಶ್ ಕೋಟ್ಯಾನ್, ಜೊಸ್ಸಿ ಮಿನೇಜಸ್, ಸುರೇಶ್ ಪ್ರಭು, ರಾಜೇಶ್ ನಾಯ್ಕ್, ಸುಭಾಸ್‍ನಗರ ಫ್ರೆಂಡ್ಸ್ ಅಧ್ಯಕ್ಷ ರಂಜಿತ್ ಸಾಲ್ಯಾನ್, ಪುರಸಭೆ ಮಾಜಿ ಸದಸ್ಯ ರಾಜೇಶ್ ಕೋಟೆಗಾರ್, ಜಿ.ಪಂ.ಮಾಜಿ ಸದಸ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ್ ಸನಿಲ್, ಪತ್ರಕರ್ತೆ ಮಮತ ಶೆಟ್ಟಿ, ಮೂಡ ಮಾಜಿ ಅಧ್ಯಕ್ಷ ರತ್ನಾಕರ ಸಿ. ಮೊಯಿಲಿ ಮತ್ತಿತರರು ಉಪಸ್ಥಿತರಿದ್ದರು. ಪುರಸಭಾ ಸದಸ್ಯ ಪುರಂದರ ದೇವಾಡಿಗ ಸ್ವಾಗತಿಸಿದರು. ನಿತೇಶ್ ಬಲ್ಲಾಳ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News