ಉಡುಪಿ: ಚಿತ್ರಕಲಾ ಪ್ರದರ್ಶನ ‘ವರ್ಣ ವೈಭವ’ಕ್ಕೆ ಚಾಲನೆ
ಉಡುಪಿ, ಜ.16: ಮಣಿಪಾಲದ ಮಣಿಪಾಲ ಸ್ಕೂಲ್ ಆಫ್ ಆರ್ಟ್, ಉಡುಪಿಯ ಚಿತ್ರಕಲಾ ಮಂದಿರದ ಸಹಯೋಗದೊಂದಿಗೆ ಆಯೋಜಿಸಿದ ಮಣಿಪಾಲ ಸ್ಕೂಲ್ ಆಫ್ ಆರ್ಟ್‌ನ ವಿದ್ಯಾರ್ಥಿಗಳ ವರ್ಣ ಚಿತ್ರಕಲಾ ಪ್ರದರ್ಶನ ‘ವರ್ಣ ವೈಭವ’ಕ್ಕೆ ಜಂಗಮ ಮಠದಲ್ಲಿರುವ ಚಿತ್ರಕಲಾ ಮಂದಿರದ ವಿಭೂತಿ ಆರ್ಟ್ ಗ್ಯಾಲರಿಯಲ್ಲಿ ಗುರುವಾರ ಚಾಲನೆ ನೀಡಲಾಯಿತು.
ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದ ನಿಟ್ಟೂರು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, ಮಕ್ಕಳ ಶ್ರೇಷ್ಠತೆಯನ್ನು ಕೇವಲ ಅಂಕಗಳ ಆಧಾರದಲ್ಲಿ ಅಳೆಯುವ ವ್ಯವಸ್ಥೆ ಈಗ ರೂಪುಗೊಂಡಿದೆ. ಕಲೆ ಎಂಬುದು ಅಪೂರ್ವ ಸಂಪತ್ತು. ಚಿತ್ರಕಲೆ ಮನಸ್ಸಿನ ಭಾವನೆಗಳನ್ನು ಹೊರಹಾಕಲು ಇರುವ ವೇದಿಕೆ. ಮಕ್ಕಳು ತಮ್ಮ ಅನುಭವಗಳಿಗೆ ಬಣ್ಣ ಹಚ್ಚಿ ರೂಪು ಕೊಡುವ ಚಿತ್ರಕಲೆ ಭವಿಷ್ಯದಲ್ಲಿ ಉತ್ತಮ ಬದುಕು ರೂಪಿಸಿಕೊಳ್ಳಲು ವೇದಿಕೆಯಾಗಲಿ ಎಂದು ಶುಭಹಾರೈಸಿದರು.
ಜ.16ರಿಂದ 20ರವರೆಗೆ ನಡೆಯುವ ಪ್ರದರ್ಶನವನ್ನು ಉದ್ಘಾಟಿಸಿದ ಬಾರಕೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಮಾಜಿ ಮೊಕ್ತೇಸರ ಅಲೆವೂರು ಯೋಗೀಶ್ ಆಚಾರ್ಯ, ಇಂದಿನ ಒತ್ತಡದ ದಿನಗಳ ಬದುಕಿನಲ್ಲಿ ಚಿತ್ರಕಲೆ ಗಳಲ್ಲಿ ತೊಡಗಿಸಿಕೊಳ್ಳುವುದು, ಚಿತ್ರಕಲೆ ವೀಕ್ಷಣೆಯಿಂದ ಮನಸ್ಸಿಗೆ ನೆಮ್ಮದಿ ದೊರಕುತ್ತದೆ ಎಂದರು.
ಚಿತ್ರಕಲಾ ಮಂದಿರದ ನಿರ್ದೇಶಕ ಡಾ.ಯು.ಸಿ. ನಿರಂಜನ್ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಅಧ್ಯಕ್ಷ ಶೇಖರ ಅಜೆಕಾರ್, ಭಗವತಿ ಯಕ್ಷಕಲಾ ಬಳಗದ ಅಧ್ಯಕ್ಷ ಪ್ರಮೋದ್ ತಂತ್ರಿ ಅತಿಥಿಗಳಾಗಿ ಭಾಗವಹಿ ಸಿದ್ದರು. ಚಿತ್ರಕಲಾ ಮಂದಿರದ ಪ್ರಾಂಶುಪಾಲ ರಾಜೇಂದ್ರ ತ್ರಾಸಿ ಉಪಸ್ಥಿತರಿದ್ದರು. ಮಣಿಪಾಲ ಸ್ಕೂಲ್ ಆಫ್ ಆರ್ಟ್‌ನ ನಿರ್ದೇಶಕ ಪಿ. ಎನ್.ಆಚಾರ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳಾಡಿದರು.
ಉಡುಪಿಯಲ್ಲಿ ನಡೆಯುವ ಅದಮಾರು ಪರ್ಯಾಯ ಮಹೋತ್ಸವದ ಪ್ರಯುಕ್ತ ನಡೆಯುವ ಚಿತ್ರಕಲಾ ಪ್ರದರ್ಶನ ಜ.20ರವರೆಗೆ ಪ್ರತಿದಿನ ಬೆಳಗ್ಗೆ ಗಂಟೆ 10ರಿಂದ ಸಂಜೆ 6:00ರವರೆಗೆ ವೀಕ್ಷಣೆಗೆ ತೆರೆದಿರುತ್ತದೆ. ಪ್ರತಿದಿನ ಅಪರಾಹ್ನ 3 ರಿಂದ 4 ರವರೆಗೆ ಪ್ರಾತ್ಯಕ್ಷಿಕೆ ನಡೆಯಲಿದೆ.
ಮಣಿಪಾಲ ಸ್ಕೂಲ್ ಆಫ್ ಆರ್ಟ್‌ನ 21 ವಿದ್ಯಾರ್ಥಿಗಳ 133 ಕಲಾಕೃತಿ ಗಳು ಪ್ರದರ್ಶನದಲ್ಲಿವೆ. ಡಾ.ಗುಣಸಾಗರಿ ರಾವ್, ಪ್ರತೀಕ್ಷಾ ಪಿ.ಶೆಣೈ, ವೈಭವ್, ವಿಮಲ್, ಸುಬ್ರಹ್ಮಣ್ಯ, ವ್ನಿೇಶ್ ಎಂ.ಸಾಲ್ಯನ್, ಪ್ರಸನ್ನ ಕೆ.ಭಟ್, ಇಶಾನ್ ಭಟ್, ಎಂ.ವಿ.ವಿ.ಎಸ್ ಸೃಜ, ಪ್ರಜ್ವಲ್, ಅನನ್ಯ ನಾಯಕ್, ಶಶಾಂಕ್, ಕೆನ್ನೆತ್, ಅನ್ವೇಶ ಪಾಟೀಲ್, ಶಿಶಿರ್, ಆದಿತ್ಯ ಎಸ್.ಕೆ, ನಿಧಿ ವರ್ಮ, ಹಿಮಾಂಶು ಎಸ್.ಕುಂದರ್, ಶ್ರಿನಿಧಿ ಎಸ್.ನಾಯಕ್, ರಾಘವೇಂದ್ರ ಎಫ್. ಎಂ., ಪವನ್ ಎಂ. ಇವರ ಚಿತ್ರಲಾಕೃತಿಗಳು ಪ್ರದರ್ಶನಗೊಂಡಿವೆ.