×
Ad

ಜ.26ರಂದು ಅಷ್ಟ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ

Update: 2020-01-16 20:05 IST

ಉಡುಪಿ, ಜ.16: ಪರ್ಕಳ ನೇತಾಜಿ ಸ್ಪೋರ್ಟ್ಸ್ ಕ್ಲಬ್‌ನ ಆಶ್ರಯದಲ್ಲಿ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್ ಸಹಯೋಗದಲ್ಲಿ ಅಷ್ಟ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆ ‘ಚಾಣಕ್ಯ-2020’ನ್ನು ಜ.26ರಂದು ಪರ್ಕಳ ಹೈಸ್ಕೂಲಿನ ಸುವರ್ಣ ಮಹೋತ್ಸವ ಸಭಾಭವನದಲ್ಲಿ ಆಯೋಜಿಸಲಾಗಿದೆ.

ಈ ಸ್ಪರ್ಧೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳ ಆಟಗಾರರು ಭಾಗವಹಿಸ ಬಹುದಾಗಿದೆ. ಇದರಲ್ಲಿ 300ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸಂಘಟಕ ಹಾಗೂ ನಗರಸಭೆ ಸದಸ್ಯ ಮಂಜುನಾಥ್ ಮಣಿಪಾಲ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಸ್ಪರ್ಧೆಯು 7,9,11,13,15 ಮತ್ತು 17ವರ್ಷ ಕೆಳ ಹರೆಯವರಿಗಾಗಿ ಆರು ಪ್ರತ್ಯೇಕ ವಿಭಾಗಗಳಲ್ಲಿ ಮತ್ತು ಮುಕ್ತ ವಿಭಾಗಗಳಲ್ಲಿ ನಡೆಯಲಿದ್ದು, ವಯೋ ಮಾನ ವಿಭಾಗದಲ್ಲಿ ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕ ಬಹುಮಾನ ನೀಡಲಾಗುವುದು. ಒಟ್ಟು 50ಸಾವಿರ ರೂ. ಮೊತ್ತದ ನಗದು ಬಹುಮಾನ ವನ್ನು ನೀಡಲಾಗುವುದು.

ಆಸಕ್ತರು ಮೊಬೈಲ್ ನಂಬರ್ 9448501387 ಮತ್ತು 7019191835ಗೆ ವಾಟ್ಸಾಪ್ ಮೂಲಕ ಅಥವಾ ಇಮೇಲ್ nethajichanakya2020 @gmail.com ಮೂಲಕ ಜ.24ರೊಳಗೆ ಹೆಸರು ನೊಂದಾವಣೆ ಮಾಡಿ ಕೊಳ್ಳಬಹುದು.

ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ಪಂದ್ಯಾಟವು ಫಿಡೇ ನಿಯಮಾವಳಿ ಅನ್ವಯ ಸ್ವಿಸ್ ಲೀಗ್, ರ್ಯಾಪಿಡ್ ಮಾದರಿ ಯಲ್ಲಿ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ಶಂಕರ ಕುಲಾಲ್, ಜಯಕುಮಾರ್, ಾಗೇಂದ್ರ ಪ್ರಭು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News