ಎರಡು ವರ್ಷಗಳಲ್ಲಿ ಹಜ್ಜೆಗೆಜ್ಜೆಯಿಂದ 50 ನೃತ್ಯ ಕಾರ್ಯಕ್ರಮ : ಯಶ ರಾಮಕೃಷ್ಣ

Update: 2020-01-16 14:40 GMT

ಕಾರ್ಕಳ, ಜ.16: ಉಡುಪಿ ಹಜ್ಜೆಗೆಜ್ಜೆ ಪ್ರತಿಷ್ಠಾನದ ರಜತಮಹೋತ್ಸವ ‘ಬೆಳ್ಳಿಹೆಜ್ಜೆ’ ಪ್ರಯುಕ್ತ ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ಕಳೆದ ಎರಡು ವರ್ಷಗಳಿಂದ ನೃತ್ಯ ಸಂಬಂಧಿ ಸುಮಾರು 50 ಕಾರ್ಯಕ್ರಮಗಳನ್ನು ನಡೆಸಿದ್ದು, ನೃತ್ಯಾಂಜಲಿ ಎಂಬ 35 ಸರಣಿ ನೃತ್ಯ ಕಾರ್ಯಕ್ರಮವನ್ನು ನೀಡಲಾಗಿದೆ ಎಂದು ಪ್ರತಿಷ್ಠಾನದ ನಿರ್ದೇಶಕಿ ಯಶ ರಾಮಕೃಷ್ಣ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸಂಪನ್ನಗೊಂಡ ಬೆಳ್ಳಿಹೆಜ್ಜೆ ಕಾರ್ಯಕ್ರಮದಲ್ಲಿ ಸುಮಾರು 20ಕ್ಕೂ ಅಧಿಕ ರಾಷ್ಟ್ರಮಟ್ಟದಲ್ಲಿ ಪ್ರಸಿದ್ದಿ ಪಡೆದ ಯುವ ಕಲಾವಿದರಿಂದ ನೃತ್ಯ ಕಾರ್ಯ ಕ್ರಮಗಳು ನಡೆದಿವೆ. ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ ನೀಡಲಾಗಿದೆ. ಅದೇ ರೀತಿ ರಾಜ್ಯಮಟ್ಟದ ಭರತ ನಾಟ್ಯ ಸ್ಪರ್ಧೆಗಳನ್ನು ಏರ್ಪ ಡಿಸಲಾಗಿತ್ತು ಎಂದರು.

ಈ ಎರಡು ವರ್ಷಗಳ ಆಚರಣೆಯಲ್ಲಿ ನೃತ್ಯಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 49 ಮಂದಿ ಕಲಾವಿದರಿಗೆ ಪ್ರಶಸ್ತಿ ನೀಡಲಾಗಿದೆ. ಸಂಸ್ಥೆಯಿಂದ ಭರತನಾಟ್ಯ ವಿದ್ವತ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬೆಳ್ಳಿಹೆಜ್ಜೆ ರಜತ ಸಂಭ್ರಮದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಗಿತ್ತು. ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಸ್ವಾಮೀಜಿ ಸಂಸ್ಥೆಗೆ ನಟರಾಜ ಪ್ರಶಸ್ತಿ ಪ್ರದಾನ ವಾಡಿದರು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಾಗಶ್ರೀ ಅನಿಲ್ ಕುಮಾರ್, ಅಂಜನಾ ಸುಧಾಕರ್, ಯನ ಪ್ರಭಾಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News