ಉಡುಪಿ ಲೆಕ್ಕಪರಿಶೋಧಕರ ಸಂಘದ ಕ್ರೀಡಾಕೂಟ
ಉಡುಪಿ, ಜ.16: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ, ದಕ್ಷಿಣ ಭಾರತ ಲೆಕ್ಕ ಪರಿಶೋಧಕರು, ವಿದ್ಯಾರ್ಥಿಗಳ ಸಂಸ್ಥೆ ಉಡುಪಿ ಶಾಖೆಯ 2019-20ನೇ ಸಾಲಿನ ಉಡುಪಿ ಸಿಕಾಸಾ ಕ್ರೀಡಾಕೂಟವು ಜ.12ರಂದು ಅಜ್ಜರಕಾಡಿನ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಿತು.
ಕ್ರೀಡಾ ಕೂಟವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಸಿಎ ದೇವಾನಂದ್ ಉದ್ಭಾಟಿಸಿದರು. ಉಡುಪಿ ಶಾಖೆಯ ಉಪಾಧ್ಯಕ್ಷ ಸಿಎ ಪ್ರದೀಪ್ ಜೋಗಿ, ಖಜಾಂಚಿ ಸಿಎ ಲೋಕೇಶ್ ಶೆಟ್ಟಿ ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಉಡುಪಿ ಶಾಖಾ ಅಧ್ಯಕ್ಷ ಸಿಎ ನರಸಿಂಹ ನಾಯಕ್ ಮಾತನಾಡಿ, ಒಬ್ಬ ವ್ಯಕ್ತಿಯು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ವಾಗಿಯೂ ಸದೃಢರಾಗಿದ್ದಾಗ ಮಾತ್ರ ಆರೋಗ್ಯವಂನಾಗಿರಲು ಸಾಧ್ಯ ಎಂದು ಹೇಳಿದರು. ಸಿಕಾಸಾ ಉಪಾಧ್ಯಕ್ಷ ನಿಖಿಲ್ ನಾಗರಾಜ್ ಸ್ವಾಗತಿಸಿದರು. ಕಾರ್ಯದರ್ಶಿ ಸಜನಿ ಜೆ.ಶೆಟ್ಟಿ ವಂದಿಸಿದರು. ರಂಜನಿ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಸಿಎ ಸದಸ್ಯರು ಸೇರಿದಂತೆ 200ಕ್ಕೂ ಅಧಿಕ ಸಿಎ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.