ಬಗಡಬೆಟ್ಟು ಸೊಸೈಟಿಗೆ ಅದಮಾರು ಶ್ರೀ ಭೇಟಿ
Update: 2020-01-16 20:16 IST
ಉಡುಪಿ, ಜ.16: ಶ್ರೀಕೃಷ್ಣನ ಪೂಜಾ ಕೈಂಕರ್ಯಕ್ಕಾಗಿ ಸರ್ವಜ್ಞ ಪೀಠಾ ರೋಹಣ ಮಾಡಲಿರುವ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಇಂದು ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗೆ ಭೇಟಿ ನೀಡಿ ಆಶೀರ್ವಚನ ನೀಡಿದರು.
ಸ್ವಾಮೀಜಿಯ ಪಾದ ಪೂಜೆಯೊಂದಿಗೆ ಸ್ವಾಗತಿಸಲಾಯಿತು. ಬಳಿಕ ಮಾತ ನಾಡಿದ ಸ್ವಾಮೀಜಿ, ಶತಮಾನೋತ್ಸವ ಸಂಭ್ರಮ ವನ್ನು ಬಹಳ ಆರ್ಥಪೂರ್ಣ ವಾಗಿ ಆಚರಿಸಿದ ಸಂಸ್ಥೆಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರು, ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿ್ದರು.