ಸಮುದ್ರ ಮಟ್ಟ ಏರಿಕೆಯಿಂದ ದೇಶಗಳ ಸಾಲ ಸಾಮರ್ಥ್ಯಕ್ಕೆ ಪೆಟ್ಟು: ಮೂಡೀಸ್ ಸಂಸ್ಥೆ

Update: 2020-01-16 16:12 GMT

ಸಿಂಗಾಪುರ, ಜ. 16: ಹೆಚ್ಚುತ್ತಿರುವ ಸಮುದ್ರ ಮಟ್ಟಗಳಿಂದಾಗಿ ಉದ್ಭವಿಸುವ ಆರ್ಥಿಕ ಆಘಾತಗಳು ಡಝನ್‌ಗಟ್ಟಳೆ ದೇಶಗಳ ಸಾರ್ವಭೌಮ ಕ್ರೆಡಿಟ್ ರೇಟಿಂಗ್‌ಗಳ ಮೇಲೆ ದೂರಗಾಮಿ ವ್ಯತಿರಿಕ್ತ ಪರಿಣಾಮಗಳನ್ನು ಬೀರಲಿವೆ ಎಂದು ಜಾಗತಿಕ ಆರ್ಥಿಕ ವಿಶ್ಲೇಷಕ ಸಂಸ್ಥೆ ಮೂಡೀಸ್ ಗುರುವಾರ ಹೇಳಿದೆ. ವಿಯೆಟ್ನಾಮ್, ಈಜಿಪ್ಟ್, ಸುರಿನಾಮ್ ಮತ್ತು ಬಹಾಮಸ್ ಮುಂತಾದ ಈ ದೇಶಗಳು ಸಮುದ್ರದ ನೀರಿನಲ್ಲಿ ಮುಳುಗುವ ಅಪಾಯವನ್ನೂ ಹೊಂದಿವೆ ಎಂದು ಅದು ಅಭಿಪ್ರಾಯಪಟ್ಟಿದೆ.

ಸಮುದ್ರ ಮಟ್ಟವು ಮುಂದಿನ ಹಲವು ದಶಕಗಳ ಕಾಲ ಏರುತ್ತಾ ಸಾಗಲಿವೆ ಎಂದಿರುವ ಪರಿಸರ ವಿಜ್ಞಾನಿಗಳು, ಇದು ಚಂಡಮಾರುತ, ಬಿರುಗಾಳಿ ಮತ್ತು ಪ್ರವಾಹ ಮುಂತಾದ ವಿಪತ್ತುಗಳನ್ನು ಸೃಷ್ಟಿಸುತ್ತದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News