ಬೆಂಕಿ ಅಕಸ್ಮಿಕ: ವೃದ್ಧೆ ಮೃತ್ಯು

Update: 2020-01-16 16:17 GMT

ಕೋಟ, ಜ.16: ಬೆಂಕಿ ಅಕಸ್ಮಿಕದಿಂದ ವೃದ್ಧೆಯೊಬ್ಬರು ಮೃತಪಟ್ಟ ಘಟನೆ ಮೊಳಹಳ್ಳಿಯ ಮೇಲ್ಬಣ್ಸಾಲೆ ಎಂಬಲ್ಲಿ ಜ.15ರಂದು ಮಧ್ಯಾಹ್ನ ವೇಳೆ ಮೃತಪಟ್ಟಿದ್ದಾರೆ.

ಮೃತರನ್ನು ಮೇಲ್ಬಣ್ಸಾಲೆಯ ಲಲಿತಾ ಶೆಡ್ತಿ(77) ಎಂದು ಗುರುತಿಸ ಲಾಗಿದೆ. ಇವರು ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಮನೆಯ ಹಿಂಬದಿಯ ತೋಟದಲ್ಲಿ ಇವರು ಕಸಕ್ಕೆ ಬೆಂಕಿ ಹಾಕುವಾಗ ಅಥವಾ ಇನ್ನಾವುದೋ ಕಾರಣ ದಿಂದ ಬೆಂಕಿಯನ್ನು ನಂದಿಸಲು ಹೋದ ಸಮಯ ಬೆಂಕಿ ಮೈಗೆ ತಾಗಿ ಸ್ಥಳದಲ್ಲಿ ಮೃತಪಟ್ಟಿದ್ದಾರೆನ್ನಲಾಗಿದೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News