×
Ad

ಅಕ್ರಮ ಸಾಗಾಟ: 1321 ಕಿಲೋ ಅನ್ನಭಾಗ್ಯದ ಅಕ್ಕಿ ವಶ

Update: 2020-01-16 21:49 IST

ಕುಂದಾಪುರ, ಜ.16: ಗೂಡ್ಸ್ ವಾಹನದಲ್ಲಿ ಉಚಿತ ಅನ್ನಭಾಗ್ಯ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಿಸುತ್ತಿದ್ದ ಇಬ್ಬರನ್ನು ಜಪ್ತಿ ಗ್ರಾಮದ ಉಳ್ಳೂರು ಕ್ರಾಸ್ ಬಳಿ ಜ.15ರಂದು ಅಪರಾಹ್ನ ವೇಳೆ ವಶಕ್ಕೆ ಪಡೆದು ಕೊಳ್ಳಲಾಗಿದೆ.

ಖಚಿತ ಮಾಹಿತಿಯಂತೆ ಕುಂದಾಪುರ ಆಹಾರ ನಿರೀಕ್ಷಕರು ಹಾಗೂ ಸಿಬ್ಬಂದಿ ಗಳು ಪೊಲೀಸರೊಂದಿಗೆ ತೆರಳಿ, ಅಕ್ಕಿ ಸಾಗಿಸುತ್ತಿದ್ದ ಟಾಟಾ ಏಸ್ ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದರು. ಇದರಲ್ಲಿ 33,048ರೂ. ಮೌಲ್ಯದ 35 ಚೀಲಗಳಲ್ಲಿ ಒಟ್ಟು 1321.54 ಕಿಲೋ ಅಕ್ಕಿ ಪತ್ತೆಯಾಗಿದೆ.

ಅಕ್ಕಿ ಸಾಗಿಸುತ್ತಿದ್ದ ಹಳವಳ್ಳಿಯ ಮೊಯಿದಿನ್(44) ಹಾಗೂ ಕಾಳಾವರದ ಬಾಲಕೃಷ್ಣ ಶೆಟ್ಟಿ(46) ಎಂಬವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇವರು ಸರಕಾರದಿಂದ ದೊರೆಯುವ ಉಚಿತ ಅನ್ನಭಾಗ್ಯ ಅಕ್ಕಿಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಿಸುತ್ತಿರುವುದಾಗಿ ವಿಚಾರಣೆ ವೇಳೆ ತಿಳಿಸಿ ದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News