×
Ad

ಕರಾವಳಿ ಯುವ ಉತ್ಸವ ಉದ್ಘಾಟನೆ

Update: 2020-01-16 21:55 IST

ಮಂಗಳೂರು, ಜ.16: ಕರಾವಳಿ ಉತ್ಸವ 2019-20ರ ಅಂಗವಾಗಿ ನಡೆಯುವ ಕರಾವಳಿ ಯುವ ಉತ್ಸವಕ್ಕೆ ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಗುರುವಾರ ಕದ್ರಿ ಪಾರ್ಕ್‌ನ ತೆರೆದ ರಂಗಮಂದಿರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು.

ಮನಪಾ ಆಯುಕ್ತ ಅಜಿತ್ ಕುಮಾರ್ ಶಾನಾಡಿ, ಜಂಟಿ ಆಯುಕ್ತ ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಚಲನಚಿತ್ರ ನಟಿ ನವ್ಯಾಪೂಜಾರಿ, ಕ್ರೀಡಾಪಟು ಪ್ರದೀಪ್ ಕುಮಾರ್ ಆಚಾರ್ಯ ಅವರನ್ನು ಸನ್ಮಾನ ಮಾಡಲಾಯಿತು.

ಕರಾವಳಿ ಯುವ ಉತ್ಸವದ ಅಂಗವಾಗಿ ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ಪರ್ಧೆಯ ಆಡಿಶನ್‌ನಲ್ಲಿ ಆಯ್ಕೆಗೊಂಡ ವೈಯಕ್ತಿಕ ಮತ್ತು ಸಮೂಹ ಸ್ಪರ್ಧೆಗಳ ಅಂತಿಮ ಸುತ್ತಿನ ಸ್ಪರ್ಧೆಗಳು ಈ ಸಂದರ್ಭ ಜರುಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News