ಉಗ್ರ ದವೀಂದರ್ ಸಿಂಗ್ ಬಗ್ಗೆ ಮೋದಿ, ಶಾ ಮೌನವೇಕೆ: ರಾಹುಲ್ ಗಾಂಧಿ ಪ್ರಶ್ನೆ

Update: 2020-01-16 16:31 GMT

ಹೊಸದಿಲ್ಲಿ: ಹಿಝ್ಬಲ್ ಉಗ್ರರ ಜೊತೆ ಜಮ್ಮು ಕಾಶ್ಮೀರದ ಡಿವೈಎಸ್ಪಿ ದವೀಂದರ್ ಸಿಂಗ್ ಸಿಕ್ಕಿಬಿದ್ದಿದ್ದು ನಾಲ್ಕು ದಿನಗಳು ಕಳೆದರೂ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಮೌನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಇದೇ ಸಂದರ್ಭ ಅವರು ಪುಲ್ವಾಮ ದಾಳಿಯಲ್ಲಿ ದವೀಂದರ್ ಸಿಂಗ್ ನ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಮತ್ತು ಆತನಿಗೆ ರಕ್ಷಣೆ ನೀಡಿದವರು ಯಾರು ಎಂಬುದರ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದರು.

"ಸರಕಾರ ಉಗ್ರ ಡಿಎಸ್ಪಿ ದವೀಂದರ್ ಸಿಂಗ್ ಬಗ್ಗೆ ಮೌನವಾಗಿದೆ. ಪ್ರಧಾನಿ , ಗೃಹ ಸಚಿವಾಲಯ ಮತ್ತು ಎನ್ ಎಸ್ ಎ ಈ ಬಗ್ಗೆ ಮೌನವೇಕೆ. ಪುಲ್ವಾಮ ದಾಳಿಯಲ್ಲಿ ದವೀಂದರ್ ಸಿಂಗ್ ನ ಪಾತ್ರವೇನು" ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News