'ಟೋಲ್‍ನಲ್ಲಿ ಫಾಸ್ಟ್ಯಾಗ್ ಕಡ್ಡಾಯ, ನಗದು ವಿನಾಯಿತಿ ಇಲ್ಲ'

Update: 2020-01-16 17:13 GMT

ಪಡುಬಿದ್ರಿ:  ಬುಧವಾರದಿಂದ ಫಾಸ್ಟ್ಯಾಗ್ ಕಡ್ಡಾಯಗೊಳಿಸಿರುವುದರಿಂದ ಹೆಜಮಾಡಿ ಟೋಲ್ ಪ್ಲಾಝಾದಲ್ಲಿ ಗುರುವಾರ ಒಂದು ದ್ವಾರವನ್ನು ನಗದು ಪಾವತಿಸಲು ಮೀಸಲಿರಿಸಲಾಗಿದೆ.

ಇದರಿಂದ ಟೋಲ್‍ನಲ್ಲಿ ವಾಹನಗಳ ಒತ್ತಡವೂ ಹೆಚ್ಚಾಗಿತ್ತು. ಫಾಸ್ಟ್ಯಾಗ್ ಇದ್ದರೂ ಆ ಖಾತೆಯಲ್ಲಿ ನಗದು ಇಲ್ಲವಾದಲ್ಲಿ ಅಂತಹಾ ವಾಹನ ಸವಾರರು ದುಪ್ಪಟ್ಟು ಪಾವತಿಸಿ ತೆರಳಬೇಕಾಗುತ್ತದೆ. ಈ ಸಂದರ್ಭಗಳಲ್ಲಿ ಟೋಲ್‍ಪ್ಲಾಝಾ ಸಿಬಂದಿ ಮತ್ತು ವಾಹನ ಚಾಲಕರ ಮಧ್ಯೆ ಮಾತಿನ ಚಕಮಕಿಯೂ ನಡೆಯುತ್ತಿತ್ತು.

ವಿನಾಯಿತಿ ಇಲ್ಲ: ನಗದು ಪಾವತಿಸಿ ಸಾಗುವ ವಾಹನಗಳಿಗೆ 24ಗಂಟೆಗಳೊಳಗಾಗಿ ವಾಪಾಸಾದರೂ ಯಾವುದೇ ವಿನಾಯಿತಿ ಲಭ್ಯವಿರುವುದಿಲ್ಲ. ವಿನಾಯಿತಿಯಿಲ್ಲದ ಏಕಮುಖ ದರವನ್ನು ಪಾವತಿಸಿಯೇ ಟೋಲ್ ಪ್ಲಾಝಾವನ್ನು ದಾಟಬೇಕಾಗುತ್ತದೆ. ಯಾವುದೇ ವಿನಾಯಿತಿ ಲಭ್ಯವಾಗಬೇಕಿದ್ದಲ್ಲಿ ವಾಹನವು ಫಾಸ್ಟ್ಯಾಗನ್ನು ಹೊಂದಿರಲೇ ಬೇಕೆಂದು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ  ಪ್ರಾಧಿಕಾರವು ಟೋಲ್‍ ಪ್ಲಾಝಾಗಳಿಗೆ ಜ. 15ರಂದು ರವಾನಿಸಿದ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ನಮೂದಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News