ಟಿಡಿಎಫ್: ಮಂಗಳೂರು ಮಳಿಗೆಯಲ್ಲಿ ನೆಕ್ಲೇಸ್, ಬಳೆಗಳ ಉತ್ಸವ

Update: 2020-01-16 17:23 GMT

ಮಂಗಳೂರು : ಟಿಡಿಎಫ್‌ನ ಮಂಗಳೂರು ಮಳಿಗೆಯಲ್ಲಿ ನೆಕ್ಲೇಸ್ ಹಾಗೂ ಬಳೆಗಳ ಉತ್ಸವ ನಡೆಯುತ್ತಿದೆ.

ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯು ದೇವತೆಗಳು ಮತ್ತು ದಿಗ್ಗಜರ ಚಿತ್ರಣದಿಂದ ತುಂಬಿದ್ದು, ಇವರೆಲ್ಲರ ಸಾಮಾನ್ಯ ಪ್ರಮುಖ ಆಸಕ್ತಿ ಆಭರಣಗಳ ಮೇಲಿನ ಅದಮ್ಯ ಪ್ರೀತಿ. ವಜ್ರ ಹಾಗೂ ಚಿನ್ನದ ಆಭರಣಗಳ ರಖಂ ಮಾರಾಟಗಾರರಾಗಿರುವ ಹಾಗೂ ಮುಂಬೈ ಹಾಗೂ ಮಂಗಳೂರಿನಲ್ಲಿ ರಿಟೇಲ್ ಮಳಿಗೆಗಳನ್ನು ಹೊಂದಿರುವ ಟಿಡಿಎಫ್- ಡೈಮಂಡ್ಸ್ ಮತ್ತು ಗೋಲ್ಡ್‌ನ ಮಳಿಗೆಯಲ್ಲಿ ಜ. 13ರಂದು ನೆಕ್ಲೇಸ್‌ಗಳು ಮತ್ತು ಬಳೆಗಳ ಉತ್ಸವ ಆರಂಭಗೊಂಡಿದ್ದು, ಜ. 19ರವರೆಗೆ ಮುಂದುವರಿಯಲಿದೆ. ಟಿಡಿಎಫ್ ಖಾನ್‌ಗಳಿಂದ ಹಿಡಿದು ಕಪೂರ್‌ವರೆಗೆ, ಕೈಗಾರಿಕೋದ್ಯಮಿಗಳು ಮತ್ತು ಕ್ರೀಡಾಪಟುಗಳು ಸೇರಿದಂತೆ ಹಲವು ಗ್ರಾಹಕರನ್ನು ಹೊಂದಿದ್ದು, ಅವರು ಟಿಡಿಎಫ್‌ನಲ್ಲಿ ಮಿತ ಬೆಲೆಯಲ್ಲಿ ಲಭ್ಯವಾಗುವ ವಿಭಿನ್ನ ಮಾದರಿಯ ವಿನ್ಯಾಸಗಳನ್ನು ಇಷ್ಟಪಡುತ್ತಾರೆ ಎಂದು ಪ್ರಕಟನೆ ತಿಳಿಸಿದೆ.

ಉನ್ನತ ಗುಣಮಟ್ಟ, ವಿನ್ಯಾಸ, ಬಹುಪಯೋಗಿ, ದಿನಬಳಕೆಯ ಮತ್ತು ನೈಜ ಆಭರಣಗಳನ್ನು ನೀಡಲು ಬಯಸಿದ ಯುವ ಮತ್ತು ಬುದ್ಧಿವಂತರಾದ ಗೌತಮ್ ಜೈನ್ ಸಿಂಘ್ವಿ ಹಾಗೂ ಅಡ್ವೆ ಪ್ರಸನ್ನ ಶೆಟ್ಟಿ 1999ರಲ್ಲಿ ಸಂಸ್ಥೆಯನ್ನು ಆರಂಭಿಸಿದರು. ಅವರ ಜತೆ ಮಂಗಳೂರಿವರೇ ಆಗಿರುವ ವಿರಾಜ್ ಹೆಗ್ಡೆ ಹಾಗೂ ಸುಧಾ ಸಂಪತ್ ಶೆಟ್ಟಿ ಸಹಾಯಕ ಪಾಲುದಾರರಾಗಿದ್ದು, ಮಂಗಳೂರು ಮಳಿಗೆಯನ್ನು ನಿರ್ವಹಿಸುತ್ತಿದ್ದಾರೆ.

ಟಿಡಿಎಫ್, ವಿಶೇಷ ಕುಶಲಕರ್ಮಿಗಳಿಂದ ತಯಾರಿಸಲ್ಪಟ್ಟ ವಜ್ರ, ಚಿನ್ನ ಹಾಗೂ ಅನ್‌ಕಟ್ ಜದಾವು ಆಭರಣಗಳ ವಿಶೇಷ ಸಂಗ್ರಹವನ್ನು ಹೊಂದಿದೆ. ಮಾತ್ರವಲ್ಲದೆ ಟಿಡಿಎಫ್ ಪ್ರಮಾಣೀಕೃತ ವಜ್ರಗಳು ಮತ್ತು ಹಾಲ್‌ಮಾರ್ಕ್ ಹೊಂದಿದ ಆಭರಣಗಳನ್ನೇ ಗ್ರಾಹಕರಿಗೆ ನೀಡುವ ಮೂಲಕ ಗ್ರಾಹಕರು ಅತ್ಯುತ್ತಮವಾದುದನ್ನೇ ಖರೀದಿಸುವ ಖಾತರಿಯನ್ನು ಒದಗಿಸುತ್ತದೆ. ಟಿಡಿಎಫ್‌ನಿಂದ ಖರೀದಿಸುವಾಗ ಗ್ರಾಹಕರು ಫ್ಯಾಕ್ಟರಿ ದರವನ್ನೇ ಪಡೆಯಬಹುದಾಗಿದೆ.

ಈ ವಿಶೇಷ ಸಂದರ್ಭದಲ್ಲಿ ಪ್ರದರ್ಶನದಲ್ಲಿರುವ ವೈವಿಧ್ಯತೆಗೆ ಯಾವುದೇ ಮಿತಿ ಇಲ್ಲ ಎಂಬುದನ್ನು ಟಿಡಿಎಫ್ ಖಾತರಿಪಡಿಸುತ್ತದೆ. ನೆಕ್ಲೇಸ್, ಬಳೆಗಳು ಮತ್ತು ಬ್ರೆಸ್‌ಲೆಟ್‌ಗಳಲ್ಲಿ 1000ಕ್ಕೂ ಅಧಿಕ ವಿನ್ಯಾಸಗಳೊಂದಿಗೆ ಒಂದೇ ಸೂರಿನಡಿ ದೊರೆಯುವುದರಿಂದ ಇದು ಪ್ರತಿ ಮಹಿಳೆಯ ಅಚ್ಚುಮೆಚ್ಚಿನ ಮಳಿಗೆಯಾಗಿದೆ. ಬೆಲೆಯಲ್ಲಿನ ನಂಬಲಸಾಧ್ಯ ರಿಯಾಯಿತಿಯನ್ನು ಪರಿಶೀಲಿಸಲು ಮಳಿಗೆಗೆ ಭೇಟಿ ನೀಡಬಹುದು.

ಮಾರ್ಝ್ ಚೇಂಬರ್ಸ್, ಅಥೆನಾ ಆಸ್ಪತ್ರೆ ಎದುರು, ಫಳ್ನೀರ್ ರಸ್ತೆ, ಮಂಗಳೂರು- 575001. ಹೆಚ್ಚಿನ ಮಾಹಿತಿಗಾಗಿ 9972548543 ಗೆ ಕರೆ ಮಾಡಬಹುದು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News