ಹಿರಾ ವಿಮೆನ್ಸ್ ಕಾಲೇಜ್ ನಲ್ಲಿ ವಾರ್ಷಿಕ ಕ್ರೀಡಾಕೂಟ

Update: 2020-01-17 05:55 GMT

ಮಂಗಳೂರು : ಹಿರಾ ವಿಮೆನ್ಸ್ ಕಾಲೇಜು, ಬಬ್ಬುಕಟ್ಟೆ  ಇಲ್ಲಿನ ವಾರ್ಷಿಕ ಕ್ರೀಡಾಕೂಟವನ್ನು ಮುಡಿಪು ಪ್ರಥಮ ದರ್ಜೆ ಕಾಲೇಜಿನ ದೈಹಿಕ ನಿರ್ದೇಶಕರಾದ ಶುಭ ಪ್ರಕಾಶ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ‘ಇಂದು ಪ್ರತಿಯೋರ್ವರು ಆರೋಗ್ಯ ಮತ್ತು ವ್ಯಾಯಾಮದ ಕುರಿತು ಕಾಳಜಿ ವಹಿಸಬೇಕು’ ಎಂದು ಹೇಳುತ್ತಾ, ವಿದ್ಯಾರ್ಥಿನಿಯರು ಕ್ರೀಡೆಗಳಲ್ಲಿ ಭಾಗವಹಿಸುವುದು ಅತ್ಯಂತ ಮುಖ್ಯ ಎಂದು ಹೇಳಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಂತಿ ಎಜುಕೇಶನಲ್ ಟ್ರಸ್ಟ್ ಸೆಕ್ರೆಟರಿ ಅಬ್ದುಲ್ ಕರೀಂ ವಹಿಸಿ, ಆರೋಗ್ಯಯುತ ಸಮಾಜದ ಬಗ್ಗೆ ಮಾತನಾಡುತ್ತಾ, ಜೀವನದಲ್ಲಿ ಕ್ರೀಡೆಯುು ಮಹತ್ವವಾದುದು ಎಂದು ವಿದ್ಯಾರ್ಥಿನಿಯರಿಗೆ ಜಾಗೃತಿ ಮೂಡಿಸಿ ಅಧ್ಯಕ್ಷೀಯ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಂತಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಎ.ಎಚ್. ಮೆಹಮೂದ್, ಹಿರಾ ಸಂಸ್ಥೆಯ ಸಂಚಾಲಕರಾದ ಅಬ್ದುರ್ರಹಮಾನ್, ಟ್ರಸ್ಟಿಗಳಾದ ಅಬ್ದುಲ್ ಖಾದರ್, ಹಸನಬ್ಬ,  ಮ್ಯಾನೇಜರ್ ಸಮೀರ್, ಶಿಹಾಬ್, ಪ್ರಾಂಶುಪಾಲರಾದ ಭಾರತಿ ಎಂ.ಆರ್. ಸಹ ಸಂಸ್ಥೆಗಳ ಮುಖ್ಯಸ್ಥರಾದ ವಿಜಯಲಕ್ಷಿ, ವನಜಾಕ್ಷಿ ಇವರು ಉಪಸ್ಥಿತರಿದ್ದರು.

ಫಾತಿಮಾ ರಹೀಮ ಮತ್ತು ಫಾತಿಮತ್ ರಾಫಿಯಾ ಕಿರಾತ್ ಪಠಿಸಿದರು. ಶಿಫಾ ಸ್ವಾಗತಿಸಿದರು. ತಶ್ರೀಫ ವಂದಿಸಿ, ಹುದಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News