ಅಮೆಝಾನ್ ಬಳಿಕ ಈಗ ಬೆಝೆಸ್ ಒಡೆತನದ ವಾಷಿಂಗ್ಟನ್ ಪೋಸ್ಟ್ ವಿರುದ್ಧವೂ ಬಿಜೆಪಿ ವಾಗ್ದಾಳಿ

Update: 2020-01-17 15:51 GMT

ಹೊಸದಿಲ್ಲಿ,ಜ.17: ಬಿಲಿಯಾಧಿಪತಿ ಜೆಫ್ ಬೆಝೆಸ್ ಅವರ ಇ-ಕಾಮರ್ಸ್ ಕಂಪನಿ ಅಮೆಝಾನ್ ಭಾರತದಲ್ಲಿ ಹೂಡಿಕೆ ಮಾಡುವ ಮೂಲಕ ದೇಶಕ್ಕೆ ಉಪಕಾರವನ್ನು ಮಾಡುತ್ತಿಲ್ಲ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಟೀಕಿಸಿದ ಬೆನ್ನಿಗೇ,ಬಿಜೆಪಿಯ ವಿದೇಶ ವ್ಯವಹಾರಗಳ ವಿಭಾಗದ ಮುಖ್ಯಸ್ಥ ವಿಜಯ ಚೌಥಾಯಿವಾಲಾ ಅವರು ಬೆರೆಸ್ ಒಡೆತನದ ‘ವಾಷಿಂಗ್ಟನ್ ಪೋಸ್ಟ್’ನ ಸಂಪಾದಕೀಯ ನೀತಿಗಳನ್ನು ಶುಕ್ರವಾರ ತರಾಟೆಗೆತ್ತಿಕೊಂಡಿದ್ದಾರೆ. 2025ರ ವೇಳೆಗೆ ದೇಶದಲ್ಲಿ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆಯನ್ನು ಅಮೆಝಾನ್ ಪ್ರಕಟಿಸಿದೆ.

ಭಾರತದ ಕುರಿತು ವಾಷಿಂಗ್ಟನ್ ಪೋಸ್ಟ್‌ನ ವರದಿಗಾರಿಕೆಯಲ್ಲಿ ಹಲವಾರು ಸಮಸ್ಯೆಗಳಿವೆ ಎಂದು ಅವರು ಹೇಳಿದರು. ಅದರೆ ಯಾವುದೇ ನಿರ್ದಿಷ್ಟ ಉದಾಹರಣೆಯನ್ನು ನೀಡಲಿಲ್ಲ.

ಭಾರತ ಪ್ರವಾಸದಲ್ಲಿರುವ ಬೆರೆಸ್ 21ನೇ ಶತಮಾನವು ಭಾರತದ್ದಾಗಲಿದೆ ಹಾಗೂ ದೇಶದಲ್ಲಿರುವ ಉತ್ಸಾಹ ಮತ್ತು ಶಕ್ತಿ ಏನೋ ವಿಶೇಷತೆಯನ್ನು ಹೊಂದಿದೆ ಎಂದು ಹೇಳಿದ್ದರು.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಚೌಥಾಯಿವಾಲಾ,ತಾನು ಅಮೆಝಾನ್ ಕಂಪನಿಯ ವಿರೋಧಿಯಲ್ಲ, ವಾಸ್ತವದಲ್ಲಿ ತಾನು ಅದರ ಗ್ರಾಹಕನಾಗಿದ್ದೇನೆ. ಬೆರೆಸ್ ಅವರು ಅಮೆರಿಕಕ್ಕೆ ಮರಳಿದ ಬಳಿಕ ಭಾರತದ ಕುರಿತು ತನ್ನ ಅನಿಸಿಕೆಯನ್ನು ವಾಷಿಂಗ್ಟನ್ ಪೋಸ್ಟ್‌ಗೆ ತಿಳಿಸಬೇಕು. ಅದರ ಸಂಪಾದಕೀಯ ನೀತಿಯು ಅತ್ಯಂತ ತಾರತಮ್ಯದ್ದಾಗಿದೆ ಮತ್ತು ಅಜೆಂಡಾ ಪ್ರೇರಿತವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News