ತುಳು ಭಾಷೆಯ ಸೊಗಡು ಶೇ.50ರಷ್ಟು ನಾಶ: ಮಾಧವ ಆಚಾರ್ಯ

Update: 2020-01-17 16:04 GMT

ಉಡುಪಿ, ಜ.17: ಹಿಂದಿನ ಕಾಲದ ತುಳು ಭಾಷೆಯ ಸೊಗಡು ಶೇ.50 ರಷ್ಟು ಇಂದು ನಶಿಸಿಹೋಗಿದೆ. ಭಾಷೆ ಒಂದು ಸಹನ ಶಕ್ತಿ. ಕೃಷಿ ಬದುಕಿನಲ್ಲಿ ಕಂಡಂತಹ ಆ ಸಂಸ್ಕೃತಿ, ಭಾಷೆಯ ಆ ಸೊಬಗನ್ನು ಮತ್ತೊಮ್ಮೆ ಕಾಣಲು ಸಾಧ್ಯವೇ ಎಂಬ ಅನುಮಾನ ಕಾಡುತ್ತಿದೆ ಎಂದು ಹಿರಿಯ ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ಹೇಳಿದ್ದಾರೆ.

ಉಡುಪಿಯ ಸಿರಿ ತುಳುವ ಚಾವಡಿ ವತಿಯಿಂದ ಐಸಿರಿ ಮಾನಾದಿಗೆ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.
ಜಾನಪದ ವಿದ್ವಾಂಸ ಡಾ.ಚಿನ್ನಪ್ಪಗೌಡ ಮಾತನಾಡಿ, ತುಳು ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಸಂಸ್ಥೆಗಳಿಗೆ ಹಣದ ಸದೃಡತೆ ಬೇಕು. ಹಾಗೆಯೆ ಅಕಾಡೆಮಿಯಲ್ಲಿ ದೊರಕುವ ಸೌಲಭ್ಯ ಈ ಸಂಸ್ಥೆಗಳಿಗೂ ಸಿಗು ವಂತಾಗಬೇಕು. ನಮ್ಮಲ್ಲಿರುವ ತುಳುನಾಡಿನ ಅಜ್ಜಿಕತೆಗಳನ್ನು ಭಾಷಾಂತರ ಮಾಡಿ ಸರ್ವರಿಗೂ ತಿಳಿಯುವಂತೆ ಮಾಡಬೇಕು ಎಂದರು.

ಡಾ.ಅರುಣ್ ಕುಮಾರ್ ಎಸ್.ಆರ್. ಸಿರಿ ಆರಾಧನೆ ಬಗ್ಗೆ ಮಾತನಾಡಿ ದರು. ಡಾ.ಅಪೇಕ್ಷ ರಾವ್, ಸುಬ್ರಮಣ್ಯ ಶ್ರೀಯಾನ್, ಮಂಜುಳಾ ಕೆ. ಶೆಟ್ಟಿ ಅತಿಥಿಗಳಾಗಿದ್ದರು. ಇದೇ ಸಂದರ್ಭದಲ್ಲಿ ಸಮಾಜ ಸೇವಕಿ ಸಾಪಲ್ಯ ಟ್ರಸ್ಟ್‌ನ ಅಧ್ಯಕ್ಷೆ ನಿರುಪಮಾ ಪಿ.ಶೆಟ್ಟಿ, ಸಾಹಿತಿ ಡಾ.ಜ್ಯೊತಿ ಚೇಳಾರು, ಯಕ್ಷಗಾನ ಕಲಾವಿದೆ ಚೈತ್ರ ವಿ.ಶೆಟ್ಟಿ ಹಾಗೂ ಇಂದು ರಮಾನಂದ ಭಟ್‌ರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆಯನ್ನು ನಿವೃತ್ತ ಶಿಕ್ಷಕ ಕುದಿ ವಸಂತ್ ಶೆಟ್ಟಿ ವಹಿಸಿದ್ದರು. ಡಾ. ವೈ.ಎನ್.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈಶ್ವರ ಚಿಟ್ಪಾಡಿ ಅತಿಥಿ ಗಳನ್ನು ಸ್ವಾಗತಿಸಿದರು. ವಿಜೇತ ಶೆಟ್ಟಿ, ಸುಪ್ರೀತ ಮತ್ತು ಶೋಭಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಜಯಶಂಕರ್ ವಂದಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶೀಲಾ ಕೆ.ಶೆಟ್ಟಿ ಎರ್ಮಾಳ್, ಸುಪ್ರಭಾ ಆಚಾರ್ಯ, ಯಶೋಧ ಜೆ.ಶೆಟ್ಟಿ, ಸುಷ್ಮಾ ಶೆಟ್ಟಿ, ಪ್ರಸನ್ನ ಚೇರ್ಕಾಡಿ ಮೊದಲಾದ ಗಣ್ಯ ಮಹಿಳೆಯರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News