ಬೈಕಾಡಿ: 20ಕ್ಕೆ ಪ್ಲಾಸ್ಟಿಕ್ ತ್ಯಾಜ್ಯ ಘಟಕದ ವಿರುದ್ಧ ಪ್ರತಿಭಟನೆ

Update: 2020-01-17 16:16 GMT

ಉಡುಪಿ, ಜ.17: ಗ್ರಾಮಗಳ ಜನರ, ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಾರದೆ ಬೈಕಾಡಿ ಗ್ರಾಮದ ಹೃದಯ ಭಾಗದ ಕೃಷಿಕರ ಕುಮ್ಕಿ ಜಮೀನಿನಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಘಟಕಕ್ಕೆ ಹಾರಾಡಿ-ಬೈಕಾಡಿ ಗ್ರಾಪಂ ನಿಯಮಬಾಹಿರವಾಗಿ ನಿರಾಕ್ಷೇಪಣಾ ಪತ್ರ ನೀಡಿರುವುದನ್ನು ಖಂಡಿಸಿ ಬೈಕಾಡಿ ನಾಗರಿಕ ಸಮಿತಿ ಜ.20ರ ಬೆಳಗ್ಗೆ 10 ಗಂಟೆಗೆ ಹಾರಾಡಿ ಗ್ರಾಪಂ ವಠಾರದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಿದೆ.

ಜಿಲ್ಲೆಯ ವಿವಿಧೆಡೆಗಳ ತ್ಯಾಜ್ಯಗಳನ್ನು ತಂದು ಇಲ್ಲಿ ವಿಲೇವಾರಿ ಮಾಡುವ ಈ ಘಟಕದ ವಿರುದ್ಧ ಉಡುಪಿ ಜಿಲ್ಲಾ ಕೃಷಿಕ ಸಂಘ, ಬೈಕಾಡಿ ಗ್ರಾಮ ಸಮಿತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸ್ವಸಹಾಯ ಗುಂಪುಗಳು, ನವೋದಯ ಸ್ವಸಹಾಯ ಗುಂಪು, ಸ್ತ್ರೀ-ಶಕ್ತಿ ಗುಂಪುಗಳು, ಭೀಮ್ ಆದ್ಮಿ ಸಂಘಟನೆ, ರಿಕ್ಷಾ ಚಾಲಕ- ಮಾಲಕರ ಸಂಘ, ಟೆಂಪೋ ಚಾಲಕ-ಮಾಲಕರ ಸಂಘಗಳು ನಾಗರಿಕ ಸಮಿತಿ ಆಯೋಜಿಸಿರುವ ಈ ಪ್ರತಿಭಟನಾ ಸಭೆಯನ್ನು ಬೆಂಬಲಿಸಿ ಪಾಲ್ಗೊಳ್ಳಲಿವೆ. ಗ್ರಾಮದ ಹಿತಾಸಕ್ತಿಗಾಗಿ ಗ್ರಾಮಸ್ಥರೆಲ್ಲರೂ ಈ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸುವಂತೆ ಉಡುಪಿ ಜಿಲ್ಲಾ ಕೃಷಿಕ ಸಂಘ ಪ್ರಕಟಣೆಯಲ್ಲಿ ವಿನಂತಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News