ಬಿಜೆಪಿ ಸಂಸದನಿಗೆ ವಿದ್ಯಾರ್ಥಿಗಳಿಂದ ‘ದಿಗ್ಬಂಧನ’ ಪ್ರಕರಣ: ವಿಶ್ವಭಾರತಿ ವಿವಿಯಿಂದ ತ್ರಿಸದಸ್ಯ ಸಮಿತಿ ರಚನೆ

Update: 2020-01-17 16:55 GMT

ಕೋಲ್ಕತಾ,ಜ.17: ಬಿಜೆಪಿ ಸಂಸದ ತಪನ್‌ದಾಸ್ ಗುಪ್ತಾ ಅವರು ಸಿಎಎ ಕಾಯ್ದೆ ಕುರಿತು ಉಪನ್ಯಾಸ ನೀಡಲು ಜನವರಿ 8ರಂದು ವಿಶ್ವಭಾರತಿ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರನ್ನು ಹಲವಾರು ತಾಸುಗಳ ಕಾಲ ಕೊಠಡಿಯಲ್ಲಿ ಕೂಡಿಹಾಕಿದ ಘಟನೆಯ ಬಗ್ಗೆ ತನಿಖೆ ನಡೆಸಲು ವಿವಿಯ ಆಡಳಿತ ಮಂಡಳಿಯು ತ್ರಿಸದಸ್ಯ ಸಮಿತಿಯನ್ನು ರಚಿಸಿದೆ.

ಸಮಿತಿಯು ಒಂದು ತಿಂಗಳ ಅವಧಿಯೊಳಗೆ ತನ್ನ ವರದಿಯನ್ನು ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿದೆ. ಜನವರಿ 15ರಂದು ವಿವಿಯ ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ನಡೆದಿದೆಯೆನ್ನಲಾದ ಘರ್ಷಣೆಯ ಬಗ್ಗೆ ಸಮಿತಿಯು ತನಿಖೆ ನಡೆಸಲಿದೆ ಎಂದು ಪೊಲೀಸರು ಗುರುವಾರ ತಿಳಿಸಿದರು.

ದಾಳಿಯಲ್ಲಿ ಶಾಮೀಲಾದ ಆರೋಪದಲ್ಲಿ ಅಚಿಂತ್ಯ ಬಾಗ್ಡಿ ಹಾಗೂ ಸಬೇರ್ ಅಲಿ ಅವರನ್ನು ಗುರುವಾರ ಬಂಧಿಸಲಾಯಿತೆಂದು ಶಾಂತಿನಿಕೇತನ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಕಳೆದ ವಾರ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಉಪನ್ಯಾಸ ಈಡಲು ಬಂದಿದ ತಪನ್‌ದಾಸ್ ಗುಪ್ತಾ ಅವರನ್ನು ಎಡಪಂಥೀಯ ವಿದ್ಯಾರ್ಥಿಗಳ ಗುಂಪೊಂದು ಮುತ್ತಿಗೆ ಹಾಕಿ ಕೊಠಡಿಯೊಂದರಲ್ಲಿ ದಿಗ್ಬಂಧನದಲ್ಲಿಟ್ಟಾಗ ನಡೆದ ಘರ್ಷಣೆಯಲ್ಲಿ ಓರ್ವ ಎಸ್‌ಎಫ್‌ಐ ಸದಸ್ಯ ಗಾಯಗೊಂಡು ಇತರ ಹಲವಾರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News