ನೀತಿ ಆಯೋಗದ ಕಾಂತ್‌ಗೆ ‘ಅಮೆಝಾನ್ ಮೋಹ’: ಸ್ವದೇಶ್ ಜಾಗರಣ್ ಮಂಚ್ ವಾಗ್ದಾಳಿ

Update: 2020-01-17 17:02 GMT

ಹೊಸದಿಲ್ಲಿ,ನ.17: ಆನ್‌ಲೈನ್ ಮಾರಾಟ ಸಂಸ್ಥೆ ಅಮೆಝಾನ್ 2025ರೊಳಗೆ 10 ಶತಕೋಟಿ ಡಾಲರ್ ಮೌಲ್ಯದ ಮೇಕ್ ಇಂಡಿಯಾ ಉತ್ಪನ್ನಗಳನ್ನು ರಫ್ತು ಮಾಡುವ ಯೋಜನೆಯನ್ನು ಹಮ್ಮಿಕೊಂಡಿದೆಯೆಂದು ಟ್ವೀಟ್ ಮಾಡಿರುವ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಭ್ ಕಾಂತ್ ವಿರುದ್ಧ ಆರೆಸ್ಸೆಸ್‌ನ ಅಂಗಸಂಸ್ಥೆಯಾದ ಸ್ವದೇಶಿ ಜಾಗರಣ ಮಂಚ್ ವಾಗ್ದಾಳಿ ನಡೆಸಿದೆ.

  ಅಮೆಝಾನ್ ನೀಡುತ್ತಿರುವ ಡಿಸ್ಕೌಂಟ್‌ಗಳ ಕೊಡುಗೆಯಿಂದಾಗಿ ಕೋಟ್ಯಂತರ ಮಂದಿ ಸಣ್ಣ ವ್ಯಾಪಾರಿಗಳು ಬಾಧಿತರಾಗಿದ್ದರೂ, ಅಮಿತಾಭ್ ಕಾಂತ್ ಅವರು, ಆನ್‌ಲೈನ್ ಮಾರಾಟ ಸಂಸ್ಥೆ ಬಗ್ಗೆ ಅನಂತವಾದ ಪ್ರೇಮ ಹೊಂದಿದ್ದಾರೆಂದು ಸ್ವದೇಶಿ ಜಾಗರಣ ಮಂಚ್‌ನ ಅಶ್ವನಿ ಮಹಾಜನ್ ಪ್ರತಿ ಟ್ವೀಟ್ ಮಾಡಿದ್ದಾರೆ.

ತೀವ್ರ ದರಕಡಿತದ ಮಾರಾಟವನ್ನು ಒಪ್ಪಲು ಸಾಧ್ಯವಿಲ್ಲವೆಂದು ಕೇಂದ್ರ ಸರಕಾರವು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಹೀಗಾಗಿ ಕಾಂತ್ ಅವರು ಅಂಗಡಿಮಾಲಕರು ಹಾಗೂ ಕಾರ್ಮಿಕರ ಪರವಾಗಿ ನಿಲ್ಲುವಂತೆ ಮಹಾಜನ್ ಇನ್ನೊಂದು ಟ್ವೀಟ್‌ನಲ್ಲಿ ಆಗ್ರಹಿಸಿದ್ದಾರೆ.

  ಅಮೆಝಾನ್ ಇಂಡಿಯಾದ ಹೂಡಿಕೆಯು ಭಾರತದ ಹಿತಾಸಕ್ತಿಯ ಪರ ಇಲ್ಲವೆಂಬ ಪಿಯೂಷ್ ಗೋಯಲ್ ಅವರ ಹೇಳಿಕೆಯನ್ನು ಕೂಡಾ ಅಶ್ವನಿ ಮಹಾಜನ್ ಸ್ವಾಗತಿಸಿದ್ದಾರೆ. ಮಾರುಕಟ್ಟೆವಲಯಗಳು ಕಾನೂನಿನ ಲೋಪದೋಷಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಬಗ್ಗೆಯೂ ಗೋಯಲ್ ಎಚ್ಚರಿಕೆ ನೀಡಿದ್ದರು.

 ವಿದೇಶಿ ಇ-ಮಾರುಕಟ್ಟೆಗಳನ್ನು ಸ್ವದೇಶಿ ಜಾಗರಣ ಮಂಚ್ ಬಳಸಿಕೊಳ್ಳುತ್ತಿದೆ. ಮಾರುಕಟ್ಟೆಯಲ್ಲಿ ಸ್ಪರ್ಧೆಯನ್ನು ನಾಶಪಡಿಸುವುದಕ್ಕಾಗಿ ಅಮೆಝಾನ್ ಹಾಗೂ ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್ ಸಂಸ್ಥೆಗಳ ವಿರುದ್ಧ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ತನಿಖೆಯನ್ನು ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News