ಯುವ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಿ: ಜಿ.ಜಗದೀಶ್

Update: 2020-01-17 17:05 GMT

ಉಡುಪಿ, ಜ.17:ಯುವ ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಜ.25ರಂದು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳು ಮತ್ತು ಬೂತ್‌ಗಳಲ್ಲಿ ಜಾಥಾ ಮತ್ತು ಪ್ರತಿಜ್ಞಾ ಬೋಧನೆಗಳನ್ನು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡುತಿದ್ದರು.

ಯುವ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಅಧಿಕಾರಿ ಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಹೊಸದಾಗಿ ಮತದಾರರ ಪಟ್ಟಿಯಲ್ಲಿ ನೋಂದಾಯಿತರಾದವರ ಎಪಿಕ್ ಕಾರ್ಡನ್ನು ಮತದಾರರ ದಿನಾಚರಣೆ ಯಂದೇ ವಿತರಣೆ ಮಾಡಲು 50 ಜನ ಯುವ ಮತದಾರರನ್ನು ಗುರುತಿಸಲು ಹಾಗೂ ಜ.24ರಂದು ಮತದಾರರ ದಿನದ ಪ್ರತಿಜ್ಞಾ ವಿಧಿಯನ್ನು ಎಲ್ಲಾ ಕಡೆಯೂ ಬೋಧಿಸಲು ತಿಳಿಸಿದರು.

ಯುವ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಅಧಿಕಾರಿ ಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ, ಹೊಸದಾಗಿ ಮತದಾರರ ಪಟ್ಟಿಯಲ್ಲಿ ನೋಂದಾಯಿತರಾದವರ ಎಪಿಕ್ ಕಾರ್ಡನ್ನು ಮತದಾರರ ದಿನಾಚರಣೆ ಯಂದೇ ವಿತರಣೆ ಮಾಡಲು 50 ಜನ ಯುವ ಮತದಾರರನ್ನು ಗುರುತಿಸಲು ಹಾಗೂ ಜ.24ರಂದು ಮತದಾರರ ದಿನದ ಪ್ರತಿಜ್ಞಾ ವಿಧಿಯನ್ನು ಎಲ್ಲಾ ಕಡೆಯೂ ಬೋಧಿಸಲು ತಿಳಿಸಿದರು. ಜ.24ರಂದು ಅಟಲ್ ಬಿಹಾರಿ ವಾಜಪೇಯಿ ಸಬಾಂಗಣದಲ್ಲಿ ಪ್ರತಿಜ್ಞಾ ವಿಧಿ ಬೋಧಿಸುವ ಕಾರ್ಯಕ್ರಮ ದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಎಲ್ಲರೂ ಕಡ್ಡಾಯವಾಗಿ ಹಾಜರಿರಬೇಕು. ಜ.25ರಂದು ಉಡುಪಿ ಪುರವನದಲ್ಲಿ ನಡೆಯುವ ಮತದಾನ ದಿನಾಚರಣೆಯಲ್ಲಿ ಎಲ್ಲಾ ಬೂತ್‌ಗಳಲ್ಲಿಯೂ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಬ್ಯಾನರ್‌ಗಳನ್ನು ಅಳವಡಿಸ ಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದ ಅಂಗವಾಗಿ ಎಲ್ಲಾ ಶಾಲೆಗಳು, ಪದವಿ ಪೂರ್ವ ಮತ್ತು ಪದವಿ ಕಾಲೇಜು ಗಳಲ್ಲಿ ಪ್ರಬಂಧ ಸ್ಪರ್ಧೆಗಳನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದ್ದು, ಮತದಾರರ ದಿನಾಚರಣೆ ಯಂದು ವಿಜೇತರಿಗೆ ಬಹುಮಾನ ನೀಡಲಾಗುವುದು. ಉತತಿಮ ಇಎಲ್‌ಸಿ ಮತ್ತು ಸಿಜೆಸಿಗಳನ್ನು ಗೌರವಿಸಲಾಗುವುದು ಹಾಗೂ ಅತಿ ಕ್ಲಿಷ್ಟಕರ ಸನ್ನಿವೇಶ ದಲ್ಲಿಯೂ ಮತದಾನ ಮಾಡಿರುವ 100 ವಯಸ್ಸು ಮೇಲ್ಪಟ್ಟ ಮತದಾರರನ್ನು ಸನ್ಮಾನಿಸಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಎಲ್ಲಾ ತಾಲೂಕುಗಳ ತಹಶೀಲ್ದಾರ್‌ಗಳು, ಯುಎಲ್‌ಬಿಗಳ ಜೊತೆ ಸಮಾಲೋಚನೆ ನಡೆಸಬೇಕು. ಕಾರ್ಯಕ್ರಮಗಳು ಯಶಸ್ವಿ ಯಾಗಲು ನಗರಸಬೆ ಅಧಿಕಾರಿಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಸಭೆ ಯಲ್ಲಿ ಅಪರ ಜಿಲ್ಲಾಧಿಕಾರಿ ದಾಶಿವ ಪ್ರಭು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News