ಸ್ಮಾರ್ಟ್‌ಸಿಟಿ ಯೋಜನೆ ಅನುಷ್ಠಾನಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ: ನಝೀರ್

Update: 2020-01-17 17:19 GMT

ಮಂಗಳೂರು, ಜ.17: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಸಾಕಷ್ಟು ರೀತಿಯಲ್ಲಿ ಅಭಿವೃದ್ಧಿಗೊಳ್ಳುತ್ತಿದ್ದು, ಇನ್ನಷ್ಟು ಯೋಜನೆಗಳು ಅನುಷ್ಠಾನ ಹಾಗೂ ಕಾಮಗಾರಿಯ ಹಂತದಲ್ಲಿದೆ. ಇದರ ಯಶಸ್ವಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ಮಂಗಳೂರು ಸ್ಮಾರ್ಟ್ ಸಿಟಿ ಲಿ.ನ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ನಝೀರ್ ಹೇಳಿದರು.

ಸ್ಮಾರ್ಟ್ ಸಿಟಿ ಕಚೇರಿಯಲ್ಲಿ ಶುಕ್ರವಾರ ನಡೆದ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನದ ಬಗ್ಗೆ ವಿವಿಧ ಸಂಘ ಸಂಸ್ಥೆಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮವನು್ನ ಉದ್ದೇಶಿಸಿ ಅವರು ಮಾತನಾಡಿದರು.

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ 45 ಯೋಜನೆಗಳಿದೆ. ಅದರಲ್ಲಿ 13 ಪಾನ್ ಸಿಟಿ ಮತ್ತು 32 ಪ್ರದೇಶ ಅಭಿವೃದ್ಧಿ ಯೋಜನೆಗಳಾಗಿವೆ. ಈಗಾಗಲೇ 8 ವಾರ್ಡಗಳು ಆಯ್ಕೆಯಾಗಿದ್ದು 1,628 ಎಕರೆ ಸ್ತೀರ್ಣದಲ್ಲಿ 2000.72 ಕೋ.ರೂ. ಪ್ರಗತಿ ಕಾರ್ಯ ನಡೆಯುತ್ತಿದೆ ಎಂದರು.

ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಪ್ರದೇಶ ಆಧಾರಿತ ಅಭಿವೃದ್ಧಿಯ ಮೂಲಕ ನಗರಾಭಿವೃದ್ಧಿ, ಮರು ಸುಧಾರಣೆ, ಹಸಿರು ಪ್ರದೇಶದ ಅಭಿವೃದ್ಧಿ ಈ ರೀತಿ ವಿಂಗಡಿಸುವ ಮೂಲಕ ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಹಾಗೂ ಪಾನ್ ಸಿಟಿ ಉತ್ತೇಜನದ ಮೂಲಕ ಮಾಹಿತಿ ತಂತ್ರಜ್ಞಾನ ಅಳವಡಿಕೆಯ ಜೊತೆಗೆ ನಗರದ ಮೂಲ ಸೌಕರ್ಯ ಸೇವೆಗಳನ್ನು ಒದಗಿಸಲಾಗಿದೆ ಎಂದು ಮುಹಮ್ಮದ್ ನಝೀರ್ ನುಡಿದರು.

ಈಗಾಗಲೇ ಈ ಯೋಜನೆಯ ಅನ್ವಯ 1.91 ಕೋ.ರೂ. ವೆಚ್ಚದಲ್ಲಿ ಎಲ್‌ಇಡಿ ಲೈಟ್ ಆಳವಡಿಸಲಾಗಿದೆ. 0.75 ಕೋ.ರೂ ವೆಚ್ಚದಲ್ಲಿ ಹಂಪನಕಟ್ಟೆಯ ಕ್ಲಾಕ್ ಟವರ್ ನಿರ್ಮಾಣಗೊಂಡಿದೆ. 6.16 ಕೋ.ರೂ ವೆಚ್ಚದಲ್ಲಿ ನೆಹರೂ ಮೈದಾನದಿಂದ ಹಂಪನಕಟ್ಟೆ ಕ್ಲಾಕ್ ಟವರ್, ಎ.ಬಿ. ಶೆಟ್ಟಿ ವೃತ್ತದವರೆಗೆ ಸ್ಮಾರ್ಟ ರಸ್ತೆ, 5 ಕೋ.ರೂ ವೆಚ್ಚದಲ್ಲಿ ರೆನ್4ರಲ್ಲಿ ಒಳಚರಂಡಿ ಕಾಮಗಾರಿ, 1.50 ಕೋ. ರೂ. ವೆಚ್ಚದಲ್ಲಿ ಸ್ಮಾರ್ಟ ಬಸ್, ಇ ಟಾಯ್ಲಟ್ (ಪಾನ್ ಸಿಟಿ ಪ್ರಥಮ ಹಂತದ) ಹಾಗೂ 3.50 ಕೋ.ರೂ. ವೆಚ್ಚದಲ್ಲಿ ಎರಡನೆ ಹಂತದಲ್ಲಿ ಕಾಮಗಾರಿ ನಡೆಯುತ್ತಿದೆ. ಹೀಗೆ ಒಟ್ಟು 18 ಕಾಮಗಾರಿಗಳು 477.68 ಕೋ. ರೂ. ವೆಚ್ಚದಲ್ಲಿ ಪ್ರಗತಿಯಲ್ಲಿದೆ ಎಂದು ನಝೀರ್ ಮಾಹಿತಿ ನೀಡಿದರು.

24.94 ಕೋ.ರೂ ವೆಚ್ಚದಲ್ಲಿ ಅಂತರ್‌ರಾಷ್ಟ್ರೀಯ ಈಜುಕೊಳ, 12 ಕೋ. ರೂ ವೆಚ್ಚದಲ್ಲಿ ಕದ್ರಿಪಾರ್ಕ್ ಸುತ್ತಮುತ್ತಲಿನ ಪ್ರದೇಶ ಅಭಿವೃದ್ದಿ, 5 ಕೋ. ರೂ ವೆಚ್ಚದಲ್ಲಿ ಕಮಾಂಡ್ ಕಂಟ್ರೋಲ್ ಬಿಲ್ಡಿಂಗ್, 4.75 ಕೋ.ರೂ ವೆಚ್ಚದಲ್ಲಿ ಕೌಶಲ ಅಭಿವೃದ್ಧಿ ಹಾಗೂ ಸುರಕ್ಷಿತ ತರಬೇತಿ ಸೆಂಟರ್, 5 ಕೋ.ರೂ. ವೆಚ್ಚ ಸೇರಿದಂತೆ 10 ಪ್ರಗತಿ ಕಾಮಗಾರಿಗಳಿಗೆ 77.76 ಕೋ.ರೂ ವೆಚ್ಚದಲ್ಲಿ ಟೆಂಡರ್ ನೀಡಲಾಗಿದೆ. 935.01 ಕೋ.ರೂ ವೆಚ್ಚದಲ್ಲಿ ಡಿಪಿಆರ್ ಹಂತದಲ್ಲಿ 11 ಪ್ರಗತಿ ಕಾರ್ಯಗಳು ನಡೆಯುತ್ತಿದೆ ಎಂದು ನಝೀರ್ ಹೇಳಿದರು.

ಸಭೆಯಲ್ಲಿ ಸ್ಮಾರ್ಟ್‌ಸಿಟಿ ಅಧಿಕಾರಿಗಳು, ಇಂಜಿನಿಯರ್‌ಗಳು ಹಾಗೂ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News