ಎನ್‍ಆರ್ ಸಿ, ಸಿಎಎ ವಿರುದ್ಧ ಜನಜಾಗೃತಿ ಅಭಿಯಾನಕ್ಕೆ ಪಿಎಫ್‍ಐ ಚಾಲನೆ

Update: 2020-01-17 17:28 GMT

ಉಪ್ಪಿನಂಗಡಿ: ಎನ್‍ಆರ್‍ಸಿ, ಸಿಎಎ ಹಾಗೂ ಎನ್‍ಆರ್‍ಪಿ ಸಂವಿಧಾನ ವಿರೋಧಿ ಕಾಯ್ದೆಯಾಗಿದ್ದು, ಇದಕ್ಕೆ ದಾಖಲೆಗಳನ್ನು ನಾವು ನೀಡುವುದಿಲ್ಲ ಎಂಬ ಜನಜಾಗೃತಿ ಅಭಿಯಾನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ವಲಯವು ಚಾಲನೆ ನೀಡಿದೆ ಎಂದು ವಲಯಾಧ್ಯಕ್ಷ ಹಮೀದ್ ಹಾಜಿ ಮೆಜೆಸ್ಟಿಕ್ ತಿಳಿಸಿದ್ದಾರೆ.

ಈಗಾಗಲೇ ಈ ಬಗ್ಗೆ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಗಿದ್ದು, ಮನೆ-ಮನೆಗೆ ಭೇಟಿ, ಕಾರ್ನರ್ ಮೀಟಿಂಗ್ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಮುಂದಿನ ಹಂತದಲ್ಲಿ ನಡೆಯಲಿದೆ. ಎನ್‍ಆರ್‍ಸಿ, ಸಿಎಎ ಹಾಗೂ ಎನ್‍ಆರ್‍ಪಿಯಂತಹ ಸಂವಿಧಾನ ವಿರೋಧಿ ಕಾಯ್ದೆಯ ಬಗ್ಗೆ ಜನರಿಗೆ ಜಾಗೃತಿ ನೀಡುವ ಉದ್ದೇಶ ಪಿಎಫ್‍ಐ ಹೊಂದಿದೆ. ಈ ಕಾಯ್ದೆಯನ್ನು ವಿರೋಧಿಸಿ ಫೆ.14ರಂದು ಸರ್ವ ಜಮಾಅತ್‍ನ ಅಂಗವಾಗಿ ಮಾನವ ಸರಪಳಿ ಕಾರ್ಯಕ್ರಮ ಕೂಡಾ ನಡೆಸಲಾಗುವುದು ಎಂದು ಹಮೀದ್ ಹಾಜಿ ಮೆಜೆಸ್ಟಿಕ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News