×
Ad

ಆಸ್ಟ್ರೇಲಿಯ ಕಾಡ್ಗಿಚ್ಚು: ಬಿಲಿಯಗಟ್ಟಳೆ ಡಾಲರ್ ವರಮಾನ ಖೋತ

Update: 2020-01-17 23:02 IST

ಸಿಡ್ನಿ (ಆಸ್ಟ್ರೇಲಿಯ), ಜ. 17: ಆಸ್ಟ್ರೇಲಿಯದಾದ್ಯಂತ ಕಾಡ್ಗಿಚ್ಚು ಪಸರಿಸುತ್ತಿರುವ ಹಿನ್ನೆಲೆಯಲ್ಲಿ ವಿದೇಶಿ ಪ್ರವಾಸಿಗರು ತಮ್ಮ ಭೇಟಿಯನ್ನು ರದ್ದುಪಡಿಸಿದ್ದು, ದೇಶವು ಪ್ರವಾಸಿ ವರಮಾನದ ರೂಪದಲ್ಲಿ ಬಿಲಿಯಗಟ್ಟಳೆ ಡಾಲರ್‌ಗಳನ್ನು ಕಳೆದುಕೊಳ್ಳಲಿದೆ ಎಂದು ಪ್ರವಾಸೋದ್ಯಮ ಇಲಾಖೆಯು ಶುಕ್ರವಾರ ಅಂದಾಜಿಸಿದೆ.

ಸೆಪ್ಟಂಬರ್‌ನಲ್ಲಿ ಕಾಡ್ಗಿಚ್ಚು ಆರಂಭಗೊಂಡಂದಿನಿಂದ ದೇಶಕ್ಕೆ ಭೇಟಿ ನೀಡುವವರ ಸಂಖ್ಯೆಲ್ಲಿ 10-20 ಶೇಕಡ ಕಡಿಮೆಯಾಗಿದೆ ಹಾಗೂ ಇದು 4.5 ಬಿಲಿಯ ಆಸ್ಟ್ರೇಲಿಯ ಡಾಲರ್ (ಸುಮಾರು 21,300 ಕೋಟಿ ರೂಪಾಯಿ) ವರಮಾನ ಖೋತಕ್ಕೆ ಕಾರಣವಾಗಬಹುದಾಗಿದೆ ಎಂದು ಆಸ್ಟ್ರೇಲಿಯನ್ ಟೂರಿಸಮ್ ಎಕ್ಸ್‌ಪೋರ್ಟ್ ಕೌನ್ಸಿಲ್ (ಎಟಿಇಸಿ) ಹೇಳಿದೆ.

‘‘ವಾಯು ಗುಣಮಟ್ಟ, ಸುರಕ್ಷತೆ ಮತ್ತು ಕಾಡ್ಗಿಚ್ಚು ನಮ್ಮ ಪ್ರವಾಸೋದ್ಯಮದ ಮೇಲೆ ಬೀರಿರುವ ಪರಿಣಾಮದಿಂದಾಗಿ ವಿದೇಶಿ ಪ್ರವಾಸಿಗರು ಆಸ್ಟ್ರೇಲಿಯಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಚೇತರಿಸಿಕೊಳ್ಳಲು ನಮಗೆ ಎಷ್ಟು ಸಮಯ ಬೇಕಾಗಬಹುದು ಎನ್ನುವ ಸರಿಯಾದ ತಿಳುವಳಿಕೆಯೂ ನಮ್ಮಲ್ಲಿಲ್ಲ’’ ಎಂದು ಎಟಿಇಸಿ ಆಡಳಿತ ನಿರ್ದೇಶಕ ಪೀಟರ್ ಶೆಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News