ಡಾವೋಸ್ ಸಮ್ಮೇಳನದಲ್ಲಿ ಟ್ರಂಪ್, ಗ್ರೆಟಾ ತನ್‌ಬರ್ಗ್ ಮುಖಾಮುಖಿ

Update: 2020-01-18 15:54 GMT

ಪ್ಯಾರಿಸ್, ಜ. 18: ಸ್ವಿಟ್ಸರ್‌ಲ್ಯಾಂಡ್‌ನ ಡಾವೋಸ್‌ನಲ್ಲಿ ಮುಂದಿನ ವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಹದಿಹರಯದ ಪರಿಸರ ಹೋರಾಟಗಾರ್ತಿ ಗ್ರೆಟಾ ತನ್‌ಬರ್ಗ್ ಮುಖಾಮುಖಿಯಾಗಲಿದ್ದಾರೆ.

ಡಾವೋಸ್‌ನಲ್ಲಿ ಜನವರಿ 21ರಿಂದ 24ರವರೆಗೆ ನಡೆಯಲಿರುವ ವಿಶ್ವ ಆರ್ಥಿಕ ವೇದಿಕೆಯ 50ನೇ ವರ್ಷದ ಸಮ್ಮೇಳನದಲ್ಲಿ 3,000ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದರೆ.

ಹವಾಮಾನ ಬದಲಾವಣೆಯಿಂದ ಹಿಡಿದು ಮಧ್ಯಪ್ರಾಚ್ಯದ ಉದ್ವಿಗ್ನತೆವರೆಗೆ ಹಲವು ಜಾಗತಿಕ ಮಹತ್ವದ ವಿಷಯಗಳ ಬಗ್ಗೆ ಇಲ್ಲಿ ಸಂವಾದ ನಡೆಯಲಿದೆ.

17 ವರ್ಷದ ಗ್ರೆಟಾ ಮತ್ತು 73 ವರ್ಷದ ಟ್ರಂಪ್ ಈಗಾಗಲೇ ಹಲವು ಬಾರಿ ಟ್ವಿಟರ್‌ನಲ್ಲಿ ಭಿನ್ನ ಧ್ವನಿಯ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. ಇದು ಡಾವೋಸ್ ಸಮ್ಮೇಳನದಲ್ಲೂ ಮುಂದುವರಿಯುವುದು ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News