ಬಂಟ್ವಾಳ : ಕಾರು - ರಿಕ್ಷಾ ನಡುವೆ ಢಿಕ್ಕಿ ; ಮಹಿಳೆಗೆ ಗಾಯ

Update: 2020-01-18 17:08 GMT

ಬಂಟ್ವಾಳ, ಜ. 18: ಕಾರೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿದ್ದ ಮಹಿಳೆಯೊಬ್ಬರು ಗಂಭೀರ ಗಾಯಗೊಂಡ ಘಟನೆ ಬಿ.ಸಿ.ರೋಡು ಸಮೀಪದ ಗಾಣದಪಡ್ಪು ಕಳ್ಳಿಮಾರ್ ಎಂಬಲ್ಲಿ ಶನಿವಾರ ನಡೆದಿದೆ.

ಕಾಮಾಜೆ ನಿವಾಸಿ ಕೃಷ್ಣಮ್ಮ ಗಾಯಗೊಂಡ ಮಹಿಳೆಯಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃಷ್ಣಮ್ಮ ಹಾಗೂ ಮಗಳು ಮಂಜುಳಾ ಅವರು ರಿಕ್ಷಾದಲ್ಲಿ ಬಿ.ಸಿ.ರೋಡಿನಿಂದ ಕಾಮಾಜೆ ಮನೆಗೆ ತೆರಳುತ್ತಿದ್ದ ವೇಳೆ ಗಾಣದಪಡ್ಪು ಕಳ್ಳಿಮಾರ್ ಎಂಬಲ್ಲಿ ಕಾರು ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News