ಮನೆಯಲ್ಲಿ ನಿಲ್ಲಿಸಿದ್ದ ಕಾರು ಕಳವು

Update: 2020-01-19 16:25 GMT

ಕಾರ್ಕಳ, ಜ.19: ಮನೆಯೊಂದಕ್ಕೆ ನುಗ್ಗಿದ ಕಳ್ಳರು, ಕಾಪಾಟಿನಲ್ಲಿದ್ದ ಕೀ ಕಳವುಗೈದು ಮನೆಯ ಎದುರು ನಿಲ್ಲಿಸಿದ ಕಾರು ಕಳವು ಮಾಡಿರುವ ಘಟನೆ ಮಿಯ್ಯಿರು ಗ್ರಾಮದ ಜೋಡುಕಟ್ಟೆ ಎಂಬಲ್ಲಿ ಜ.17ರ ಮಧ್ಯಾಹ್ನದಿಂದ 19ರ ಬೆಳಗ್ಗೆ 10ಗಂಟೆಯ ಮಧ್ಯಾವಧಿಯಲ್ಲಿ ನಡೆದಿದೆ.

ಮೆಲ್ಕರ್ ಡಿಸೋಜ ಎಂಬವರ ಅಕ್ಕನ ಮನೆಯ ಮುಂದಿನ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಕಪಾಟಿನಲ್ಲಿರಿಸಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, 2,00,000 ರೂ. ಮೌಲ್ಯದ ಕೆಎ-20-ಪಿ-893ನೆ ನಂಬರಿನ ಕಾರಿನ ಕೀಯನ್ನು ತೆಗೆದುಕೊಂಡು ಹೊರಗಡೆ ನಿಲ್ಲಿಸಿದ ಕಾರನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News