ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ಸಿಎಎ ವಿರುದ್ಧ ನಿರ್ಣಯಗಳನ್ನು ತರಲು ಕಾಂಗ್ರೆಸ್ ಚಿಂತನೆ

Update: 2020-01-19 16:29 GMT

ಹೊಸದಿಲ್ಲಿ,ಜ.19: ರಾಜಸ್ಥಾನ,ಮಧ್ಯಪ್ರದೇಶ ಮತ್ತು ಛತ್ತೀಸ್‌ ಗಡದಂತಹ ತನ್ನ ಆಡಳಿತವಿರುವ ರಾಜ್ಯಗಳ ವಿಧಾನಸಭೆಗಳಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ(ಸಿಎಎ)ಯ ವಿರುದ್ಧ ನಿರ್ಣಯಗಳನ್ನು ತರಲು ಕಾಂಗ್ರೆಸ್ ಯೋಜಿಸಿದೆ ಮತ್ತು ಇದು ಕಾಯ್ದೆಯನ್ನು ಮರುಪರಿಶೀಲಿಸುವಂತೆ ಕೇಂದ್ರಕ್ಕೆ ಸ್ಪಷ್ಟ ಸಂದೇಶವಾಗಲಿದೆ ಎಂದು ಪಕ್ಷದ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರು ರವಿವಾರ ಇಲ್ಲಿ ತಿಳಿಸಿದರು. ಕಾಂಗ್ರೆಸ್ ಆಡಳಿತದ ಪಂಜಾಬ್ ಮತ್ತು ಎಡರಂಗ ಆಡಳಿತದ ಕೇರಳ ವಿಧಾನಸಭೆಗಳು ಈಗಾಗಲೇ ಸಿಎಎ ವಿರುದ್ಧ ನಿರ್ಣಯಗಳನ್ನು ತಂದಿವೆ.

ಪಂಜಾಬ್ ಸಚಿವ ಬ್ರಹ್ಮ ಮಹೀಂದ್ರ ಅವರು ಕಳೆದ ವಾರ ಮಂಡಿಸಿರುವ ನಿರ್ಣಯದಲ್ಲಿ ಸಿಎಎ ಹಿಂದಿನ ಸಿದ್ಧಾಂತವು ತಾರತಮ್ಯದಿಂದ ಕೂಡಿದೆ ಮತ್ತು ಅಮಾನವೀಯವಾಗಿದೆ ಎಂದು ಹೇಳಲಾಗಿದೆ. ಸಿಎಎ ವಿರುದ್ಧ ನಿರ್ಣಯವನ್ನು ಅಂಗೀಕರಿಸಿರುವ ಕೇರಳವು ಅದನ್ನು ಸರ್ವೋಚ್ಚ ನ್ಯಾಯಾಲಯದಲ್ಲಿಯೂ ಪ್ರಶ್ನಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News