ಎರಡು ದ್ವಿಚಕ್ರ ವಾಹನಗಳ ಕಳವು

Update: 2020-01-19 16:35 GMT

ಕಾಪು, ಜ.19: ಕಾಪು ಲೈಟ್ಹೌಸ್ ಅಪಾರ್ಟ್‌ಮೆಂಟ್ ಬಳಿ ನಿಲ್ಲಿಸಿ ಪರ್ಯಾಯ ಮಹೋತ್ಸವ ನೋಡಲು ಉಡುಪಿಗೆ ತೆರಳಿದ್ದ ಇಬ್ಬರ ದ್ವಿಚಕ್ರ ವಾಹನಗಳು ಕಳವಾಗಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜ.17ರಂದು ಅಪಾರ್ಟ್‌ಮೆಂಟ್ ಪಾರ್ಕಿಂಗ್ ಸ್ಥಳದಲ್ಲಿ ರಾತ್ರಿ ವೇಳೆ ನಿಲ್ಲಿಸಿದ್ದ ಅಶ್ವಿನ್ ಕೆ.ಅಮೀನ್ ಎಂಬವರ 20 ಸಾವಿರ ರೂ. ಮೌಲ್ಯದ ಕೆಎ 20 ಇಸಿ 8673 ನಂಬರಿನ ಹೊಂಡ ಡಿಯೋ ಸ್ಕೂಟರ್ ಹಾಗೂ ಅಪಾರ್ಟ್ ಮೆಂಟ್‌ನ ಆವರಣದ ಹೊರಗಡೆ ಸಂಜೆ ವೇಳೆ ನಿಲ್ಲಿಸಿದ್ದ ಭಾಸ್ಕರ ಆರ್ ಅಮೀನ್ ಎಂಬವರ 24 ಸಾವಿರ ರೂ. ಮೌಲ್ಯದ ಕೆಎ 20 ಇಡಿ 1757 ನಂಬರಿನ ಸುಜಿಕಿ ಆಕ್ಸಸ್ 125 ಸ್ಕೂಟರ್‌ಗಳನ್ನು ಕಳವು ಮಾಡಲಾಗಿದೆ. ಈ ಕಳವು ಪ್ರಕರಣ ಜ.18ರ ಬೆಳಗ್ಗೆ ಬೆಳಕಿಗೆ ಬಂತೆನ್ನಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News